ಉ.ಪ್ರದೇಶದಲ್ಲಿ ಸೂರ್ಯಾಸ್ತದ ನಂತ್ರ ಓಡಾಡುವ ಯುವತಿಯರು ಕಾಣೆಯಾಗ್ತಾರೆ: ಗೋವಾ ಸಿಎಂ

ಶುಕ್ರವಾರ, 25 ಜುಲೈ 2014 (13:34 IST)
ಗೋವಾದ ಸಚಿವರ ವಿವಾದಾತ್ಮಕ ಹೇಳಿಕೆಗಳ ಸರಣಿ ಮುಂದುವರೆದಿದ್ದು, ಈಗ ಆ ಸಾಲಿಗೆ ಸೇರ್ಪಡೆಯಾಗಿರುವುದು ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಹೇಳಿಕೆ. ಸಂಜೆಯಾದ ನಂತರ ಉತ್ತರಪ್ರದೇಶದ ರಸ್ತೆಗಳಲ್ಲಿ ಓಡಾಡುವ ಹುಡುಗಿಯರು ಮಾಯವಾಗಿ ಬಿಡುತ್ತಾರೆ ಎಂದು ಹೇಳುವುದರ ಮೂಲಕ ಅವರು ಹೊಸದೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ. 

ಕರಾವಳಿ ರಾಜ್ಯದಲ್ಲಿನ ಕಾನೂನು ಸುವ್ಯವಸ್ಥೆ ಕುರಿತು ವಿರೋಧ ಪಕ್ಷದವರು ವಿಧಾನಸಭೆಯಲ್ಲಿ ಕಳವಳ ವ್ಯಕ್ತಪಡಿಸಿದ ಸಮಯದಲ್ಲಿ ಉತ್ತರಿಸುತ್ತಿದ್ದ ಅವರು ಗೋವಾದ ರಸ್ತೆಗಳಲ್ಲಿ ಮಧ್ಯರಾತ್ರಿ ಕೂಡ ಹುಡುಗಿಯರು ಯಾವ ಭಯವಿಲ್ಲದೇ ಓಡಾಡಬಹುದು. ಆದರೆ ಉತ್ತರಪ್ರದೇಶದಲ್ಲಿ  ಸಂಜೆ 6 ಗಂಟೆಯ ನಂತರ ಹೊರಗೆ ಓಡಾಡುವ ಹುಡುಗಿಯರು ಮಾಯವಾಗಿ ಬಿಡುತ್ತಾರೆ ಎಂದು ಹೇಳುವುದರ ಮೂಲಕ ಉತ್ತರದ ರಾಜ್ಯಕ್ಕೆ ಹೋಲಿಸಿದರೆ ತಮ್ಮ ರಾಜ್ಯ ಮಹಿಳೆಯರಿಗೆ ಸಂಬಂಧಿಸಿದಂತೆ ಸುರಕ್ಷಿತ ಎಂಬುದನ್ನು ಬಿಂಬಿಸಲು ಪ್ರಯತ್ನಿಸಿದರು. 
 
ಪ್ರತಿವರ್ಷ, ಮಿಲಿಯನ್‌ಗಿಂತಲೂ ಹೆಚ್ಚು ದೇಶಿಯ ಹಾಗೂ ಅಂತಾರಾಷ್ಟ್ರೀಯ ಪ್ರವಾಸಿಗರು ರಜಾದಿನವನ್ನು ಕಳೆಯಲು ಗೋವಾಕ್ಕೆ ಬರುತ್ತಾರೆ . ಆ ಕಾರಣಕ್ಕೆ ಪ್ರವಾಸೋದ್ಯಮದಲ್ಲಿ ಆಸಕ್ತರಾಗಿರುವ ಕೆಲವು ರಾಜ್ಯಗಳು ಗೋವಾ ಹೆಸರಿಗೆ ಕಳಂಕ ತರಲು ನಿರತರಾಗಿವೆ ಎಂದು ಅವರು ಆರೋಪಿಸಿದರು.  

ವೆಬ್ದುನಿಯಾವನ್ನು ಓದಿ