ಡ್ರೆಸ್ ಕೋಡ್ ನಿಷೇಧ: ಆದೇಶ ಹಿಂದಕ್ಕೆ ಪಡೆದ ಗೋವಾ ಸರಕಾರ

ಶನಿವಾರ, 28 ಮಾರ್ಚ್ 2015 (15:31 IST)
ಸರಕಾರದ ಕಲೆ ಮತ್ತು ಸಂಸ್ಕ್ರತಿ ಸಚಿವಾಲಯ ಸಿಬ್ಬಂದಿಗಳು ಸ್ಲೀವ್‌ಲೆಸ್ ಬ್ಲೌಸ್ ಬಹುಪಾಕೆಟ್ ಪ್ಯಾಂಟ್ ಮತ್ತು  ಜೀನ್ಸ್ ಗಳನ್ನು ನಿಷೇಧಿಸಿ ಆದೇಶ ಹೊರಡಿಸಿರುವುದನ್ನು ಸ್ಥಳೀಯವಾಗಿ ಮತ್ತು ರಾಷ್ಟ್ರಮಟ್ಟದಲ್ಲಿ ತಪ್ಪಾಗಿ ಅರ್ಥೈಸಲಾಗುತ್ತಿರುವುದರಿಂದ ಆದೇಶವನ್ನು ಹಿಂಪಡೆಯಲಾಗಿದೆ ಎಂದು ಸರಕಾರಿ ಮೂಲಗಳು ತಿಳಿಸಿವೆ.

ಸರಕಾರ ಹೊರಡಿಸಿದ ನೂತನ ಆದೇಶದ ಪ್ರಕಾರ, ಸಚಿವಾಲಯದ ಸಿಬ್ಬಂದಿಗಳು ಸೆಮಿ-ಫಾರ್ಮಲ್, ಫಾರ್ಮಲ್ ಅಥವಾ ಸ್ಮಾರ್ಟ್ ಡ್ರೆಸ್‌ಗಳು ಸೇರಿದಂತೆ ತಮಗೆ ಇಷ್ಟವಾದ ಡ್ರೆಸ್‌ಗಳನ್ನು ಧರಿಸುವಂತೆ ನಿರ್ದೆಶನ ನೀಡಿದೆ

ಸಚಿವಾಲಯದ ಸಿಬ್ಬಂದಿಗಳು ಕಚೇರಿಯನ್ನು ಪ್ರವೇಶಿಸುವ ಸಂದರ್ಭದಲ್ಲಿ ಫಾರ್ಮಲ್ ಡ್ರೆಸ್‌ಗಳನ್ನು ಧರಿಸುವಂತೆ ಆದೇಶ ನೀಡಿತ್ತು. ಆದರೆ, ಸರಕಾರದ ಆದೇಶವನ್ನು ತಪ್ಪಾಗಿ ಬಿಂಬಿಸುತ್ತಿರುವ ಹಿನ್ನೆಲೆಯಲ್ಲಿ ಆದೇಶವನ್ನು ಸರಕಾರ ಹಿಂದಕ್ಕೆ ಪಡೆದಿದೆ ಎಂದು ಇಲಾಖೆಯ ನಿರ್ದೆಶಕ ಪ್ರಸಾದ್ ಲೋಲಾಯೋಕರ್ ತಿಳಿಸಿದ್ದಾರೆ.

ಈ ಹಿಂದೆ ಸರಕಾರದ ಕಲೆ ಮತ್ತು ಸಂಸ್ಕ್ರತಿ ಸಚಿವಾಲಯ ಸಿಬ್ಬಂದಿಗಳು ಸ್ಲೀವ್‌ಲೆಸ್ ಬ್ಲೌಸ್ ಬಹುಪಾಕೆಟ್ ಪ್ಯಾಂಟ್ ಮತ್ತು  ಜೀನ್ಸ್ ಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು.

ರಾಜ್ಯದ ಕಲೆ ಮತ್ತು ಸಂಸ್ಕ್ರತಿ ಖಾತೆ ಸಚಿವ ದಯಾನಂದ ಮಾಂಡ್ರೆಕರ್ ಬಜೆಟ್ ಅಧಿವೇಶನ ಸಂದರ್ಭದಲ್ಲಿ ಮಾತನಾಡಿ, ಸರಕಾರದ ಆದೇಶವನ್ನು ಸಿಬ್ಬಂದಿಗಳು ಪಾಲಿಸುತ್ತಿರುವ ಗಮನಹರಿಸಲು ಇಲಾಖೆಯ ನಿರ್ದೇಶಕರಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದರು.

ಇಲಾಖೆಯ ಸಿಬ್ಬಂದಿಗಳು ಫಾರ್ಮಲ್ ಡ್ರೆಸ್‌ ಧರೆಸಬೇಕೆ ಹೊರತು ಜೀನ್ಸ್ ಧರಿಸುವಂತಿಲ್ಲ. ಟೀ-ಶರ್ಟ್, ಜರ್ಕಿನ್ ಸ್ಲೀವ್ ಲೆಸ್ ಡ್ರೆಸ್‌ಗಳು ಇತ್ಯಾದಿ ಕಚೇರಿಯ ಸಮಯದಲ್ಲಿ ಧರಿಸುವಂತಿಲ್ಲ ಎಂದು ಇಲಾಖೆಯ ನಿರ್ದೇಶಕ ಪ್ರಸಾದ್ ಲೊಲಾಯೆಕರ್ ಇಲಾಖೆ ಸಿಬ್ಬಂದಿಗೆ ನೋಟಿಸ್ ಜಾರಿ ಮಾಡಿದ್ದರು.

ರಾಜ್ಯ ಸರಕಾರದ ಡ್ರೆಸ್ ಕೋಡ್ ಆದೇಶದ ಪಾಲನೆಯಾಗುತ್ತಿದೆಯೋ ಇಲ್ಲವೋ ಎನ್ನುವ ಬಗ್ಗೆ ಉಪನಿರ್ದೇಶಕರು ನಿಗಾವಹಿಸಬೇಕು ಎಂದು ಸರಕಾರ ಆದೇಶ ನೀಡಿತ್ತು.

ಕೆಲ ವಾರಗಳ ಹಿಂದೆ ಬಿಜೆಪಿ ನೇತೃತ್ವದ ಸಮ್ಮಿಶ್ರ ಸರಕಾರದ ಸಚಿವರು ದೇಶದ ಸಂಸ್ಕ್ರತಿಗೆ ವಿರುದ್ಧವಾಗಿರುವ ಎಲ್ಲಾ ಬಗೆಯ ಡ್ರೆಸ್‌ಗಳನ್ನು ನಿಷೇಧ ಹೇರುವಂತೆ  ಸರಕಾರದ ಮೇಲೆ ಒತ್ತಡ ತಂದಿದ್ದರು.

ವೆಬ್ದುನಿಯಾವನ್ನು ಓದಿ