ಬಿಜೆಪಿಯ ಇಬ್ಬರು ಸಚಿವರು, ನಾಲ್ಕು ಶಾಸಕರ ವಿದೇಶಿ ಪ್ರವಾಸ ವೆಚ್ಚ ಕೇವಲ 6.20 ಕೋಟಿ ರೂ.

ಬುಧವಾರ, 1 ಏಪ್ರಿಲ್ 2015 (17:08 IST)
ಕಳೆದ ಎರಡು ವರ್ಷಗಳ ಅವಧಿಯಲ್ಲಿ ರಾಜ್ಯದ ಇಬ್ಬರು ಸಚಿವರು ಹಾಗೂ ನಾಲ್ಕು ಶಾಸಕರ 20 ದೇಶಗಳ ಪ್ರವಾಸ ವೆಚ್ಚ 6.20 ಕೋಟಿ ರೂಪಾಯಿಗಳಾಗಿವೆ ಎಂದು ಸರಕಾರ ವಿಧಾನಸಭೆಗೆ ಮಾಹಿತಿ ನೀಡಿದೆ.

ರಾಜ್ಯ ಸರಕಾರದ ಪ್ರಕಾರ, ಪ್ರವಾಸೋದ್ಯಮ ಸಚಿವ ದಿಲೀಪ್ ಪರುಲೇಕರ್ ಮತ್ತು ಕೈಗಾರಿಕೋದ್ಯಮ ಸಚಿವ ಮಹಾದೇವ್ ನಾಯಕ್ ಪ್ರವಾಸೋದ್ಯಮ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು 20 ದೇಶಗಳ ಪ್ರವಾಸಗೈದಿದ್ದಾರೆ.

ಉಪಸಭಾಪತಿ ಅನಂತ್ ಶೇಟ್, ಪ್ರವಾಸೋದ್ಯಮ ಇಲಾಖೆಯ ಮುಖ್ಯಸ್ಥ  ನಿಲೇಶ್ ಕಬ್ರಾಲ್ ಮತ್ತು ಬಿಜೆಪಿ ಶಾಸಕರಾದ ಗಣೇಶ್ ಗಾಂವಕರ್ ಮತ್ತು ಸುಭಾಷ್ ಫಾಲ್‌ದೇಸಾಯಿ ಸರಕಾರಿ ವೆಚ್ಚದಲ್ಲಿ ಪ್ರವಾಸ ಮಾಡಿದ್ದಾರೆ.  ಪ್ರವಾಸೋದ್ಯಮ ಸಚಿವ ದಿಲೀಪ್ ಪರುಲೇಕರ್ ದುಬೈ, ಎಡಿನ್‌ಬರ್ಗ್, ಲೀಡ್ಸ್, ಯುಕೆ, ಲಾಸ್‌ಏಂಜಲೀಸ್, ನ್ಯೂಯಾರ್ಕ್, ಇಸ್ತಾನ್‌ಬುಲ್ ಮತ್ತು ತುರ್ಕಿ ದೇಶಗಳಿಗೆ ಮಾಡಿದ ಪ್ರಯಾಣ ವೆಚ್ಚ 3.36 ಕೋಟಿ ರೂಪಾಯಿಗಳಾಗಿವೆ ಎಂದು ಸದನಕ್ಕೆ ಸರಕಾರ ಮಾಹಿತಿ ನೀಡಿದೆ.     

ಸಚಿವರ ಚಿಕಾಗೋ, ಯುಎಸ್‌ಎ, ಅಮ್‌ಸ್ಟೆರ್‌ಡಮ್ ಮತ್ತು ನೇದರ್ ಲ್ಯಾಂಡ್ ಪ್ರವಾಸದ ವೆಚ್ಚಗಳ ವಿವರಗಳನ್ನುಟ್ರಾವೆಲ್ ಏಜೆಂಟ್ ನೀಡಿಲ್ಲ ಎಂದು ಹೇಳಲಾಗಿದೆ.  

ಸಾರ್ವಜನಿಕರ ಹಣವನ್ನು ಬಿಜೆಪಿಯ ಸಚಿವರು ಮತ್ತು ಶಾಸಕರು ಪೋಲು ಮಾಡುತ್ತಿದ್ದಾರೆ. ಇದೊಂದು ಜನವಿರೋಧಿ ಸರಕಾರ ಎಂದು ವಿಪಕ್ಷಗಳು ಟೀಕಿಸಿವೆ.

ವೆಬ್ದುನಿಯಾವನ್ನು ಓದಿ