ಮುಂದಿನ ಐದು ವರ್ಷಗಳಲ್ಲಿ ಐಟಿ ಕ್ಷೇತ್ರದಲ್ಲಿ ಕರ್ನಾಟಕ, ತಮಿಳುನಾಡನ್ನು ಹಿಂದಿಕ್ಕುತ್ತೇವೆ: ಪರ್ಸೇಕರ್

ಸೋಮವಾರ, 6 ಜೂನ್ 2016 (20:27 IST)
ಗೋವಾ ರಾಜ್ಯದಲ್ಲಿ ವಿದ್ಯಾರ್ಥಿಗಳು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವುದರಿಂದ ಮುಂಬರುವ ವರ್ಷಗಳಲ್ಲಿ ಐಟಿ ಕ್ಷೇತ್ರದಲ್ಲಿ ಕರ್ನಾಟಕ, ತಮಿಳುನಾಡು ರಾಜ್ಯವನ್ನು ಹಿಂದಿಕ್ಕಿ ಮುಂದೆ ಸಾಗುತ್ತೇವೆ ಎಂದು ಮುಖ್ಯಮಂತ್ರಿ ಲಕ್ಷ್ಮಿಕಾಂತ್ ಪರ್ಸೇಕರ್ ಹೇಳಿದ್ದಾರೆ.
 
ಗೋವಾ ರಾಜ್ಯಕ್ಕೆ ದೇವರ ಆಸೀರ್ವಾದವಿದೆ. ಒಂದು ವೇಳೆ ರಾಜ್ಯ ಸರಕಾರ ಗಂಭೀರವಾಗಿ , ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಿದಲ್ಲಿ ಐಟಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಇನ್‌ಫಾರ್ಮೇಶನ್ ಟೆಕ್ನಾಲಾಜಿ ಕಾರ್ಪೋರೇಶನ್ ಕಟ್ಟಡ ಉದ್ಘಾಟಿಸಿ ಪರ್ಸೇಕರ್ ಮಾತನಾಡುತ್ತಿದ್ದರು.
 
ಗೋವಾ ರಾಜ್ಯದಲ್ಲಿ ಪ್ರತಿಭಾವಂತರಿರುವುದರಿಂದ ಮುಂದಿನ 5-6 ವರ್ಷಗಳಲ್ಲಿ ಕರ್ನಾಟಕ, ತಮಿಳುನಾಡು ರಾಜ್ಯಗಳನ್ನು ಹಿಂದಕ್ಕೆ ತಳ್ಳಿ ನಾವೇ ಮುಂಚೂಣಿಯಲ್ಲಿರುತ್ತೇವೆ ಎಂದು ತಿಳಿಸಿದ್ದಾರೆ.
 
ಗೋವಾ ರಾಜ್ಯದಲ್ಲಿ ಐಟಿ ಕಂಪೆನಿಗಳಿಗೆ ಅವಕಾಶ ನೀಡದಲ್ಲಿ ಬೇರೆ ರಾಜ್ಯಗಳಿಗೆ ತೆರಳಿದ ಐಟಿ ಉದ್ಯೋಗಿಗಳು ರಾಜ್ಯಕ್ಕೆ ಮರಳುತ್ತಾರೆ. ಮುಂಬರುವ ದಿನಗಳಲ್ಲಿ ಕೈಗಾರಿಕೆ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಮುಖ್ಯಮಂತ್ರಿ ಪರ್ಸೇಕರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ