ಈ ಹಳ್ಳಿಯಲ್ಲಿನ್ನು ಕಿಸ್ ಕೊಡುವ ಹಾಗಿಲ್ಲ

ಶುಕ್ರವಾರ, 27 ಮಾರ್ಚ್ 2015 (09:46 IST)
ಗೋವಾದ ಹಳ್ಳಿಯೊಂದರಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ಬಹಿರಂಗ ಚುಂಬನವನ್ನು ನಿಷೇಧಿಸಲಾಗಿದೆ. 


 
ಸದಾ ವಿದೇಶಿ ಪ್ರವಾಸಿಗರಿಂದ ಗಿಜಿಗಿಡುವ ಗೋವಾದಲ್ಲಿ ಜೋಡಿಗಳು ಸಾರ್ವಜನಿಕ ಸ್ಥಗಳಲ್ಲಿ ಪರಷ್ಪರ ಮುತ್ತಿಕ್ಕುವ ದೃಶ್ಯ ಸಾಮಾನ್ಯವಾಗಿ ಎಲ್ಲಕಡೆ ಕಂಡು ಬರುವಂತದ್ದು. ಇದು ಸ್ಥಳೀಯರಿಗೆ ಮುಜುಗರ ತರುತ್ತಿದ್ದರೂ ನೋಡಿದರೂ ನೋಡದ ಹಾಗೆ ಇದ್ದು ಬಿಡುತ್ತಾರೆ. ಆದರೆ ಗೋವಾದ ಆ ಹಳ್ಳಿಯ ಜನ ವಿದೇಶಿಗರು ಬಹಿರಂಗವಾಗಿ ಮುತ್ತಿಕ್ಕುತ್ತ ತಿರುಗುವುದರಿಂದ ಕಿರಿಕಿರಿಯಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು.  
 
ಹೀಗಾಗಿ ಸಾರ್ವಜನಿಕರ ಒತ್ತಾಯದ ಮೇರೆಗೆ ಸಲ್ವಡಾರ್ ಡು ಮುಂಡೊ ಎಂಬ ಆ ಹಳ್ಳಿಯಲ್ಲಿ  ಬಹಿರಂಗವಾಗಿ ಮುತ್ತಿಕ್ಕುವುದನ್ನು ನಿಷೇಧಿಸಲಾಗಿದೆ.
 
ಚುಂಬನ, ಮದ್ಯಪಾನ, ಜೋರಾಗಿ ಮ್ಯೂಸಿಕ್ ಪ್ಲೇ ಮಾಡುವುದು ಈ ಹಳ್ಳಿಯಲ್ಲಿ ನಿಷಿದ್ಧ ಎಂಬ ಬ್ಯಾನರ್‌ನ್ನು ಹಳ್ಳಿಯಲ್ಲಿ ಹಾಕಲಾಗಿದೆ. 
 
ಸಾರ್ವಜನಿಕ ಚುಂಬನ, ಮದ್ಯ, ಧೂಮಪಾನ, ಜೋರಾದ ಸಂಗೀತ, ಗದ್ದಲ ಮಾಡುವುದನ್ನು ನಮ್ಮ ಹಳ್ಳಿಯಲ್ಲಿ ನಿಷೇಧಿಸಲಾಗಿದೆ. ಪ್ರವಾಸಿಗರೇ ನಮ್ಮ ಹಳ್ಳಿಯನ್ನು ಶುಚಿಯಾಗಿರಿಸಿ ಎಂದು ಬ್ಯಾನರ್‌ನಲ್ಲಿ ಬರೆಯಲಾಗಿದೆ. 

ವೆಬ್ದುನಿಯಾವನ್ನು ಓದಿ