ಬೀದಿನಾಯಿಗಳ ಹತ್ಯೆ ಮಾಡಿ: ಗೋಲ್ಡ್ ನಾಣ್ಯ ಗೆಲ್ಲುವ ಅವಕಾಶ ಪಡೆಯಿರಿ

ಸೋಮವಾರ, 31 ಅಕ್ಟೋಬರ್ 2016 (13:18 IST)
ಕೇರಳದಾದ್ಯಂತ ಬೀದಿನಾಯಿಗಳ ಕಾಟ ವಿಪರೀತವಾಗಿದ್ದು, ವಾರದೊಳಗೆ ನಾಲ್ವರು ಬಲಿಯಾಗಿರುವ ಘಟನೆ ವರದಿಯಾದ ಹಿನ್ನೆಲೆಯಲ್ಲಿ ಅತಿ ಹೆಚ್ಚು ಬೀದಿ ನಾಯಿಗಳನ್ನು ಹತ್ಯೆ ಮಾಡುವ ಪುರಸಭೆ, ನಗರಸಭೆ ಮತ್ತು ಕಾರ್ಪೋರೇಶನ್ ಅಧಿಕಾರಿಗಳಿಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಕೇರಳದ ವಿದ್ಯಾರ್ಥಿ ಸಂಘಟನೆಯೊಂದು ಘೋಷಿಸಿದೆ. 
 
ಕಳೆದ ನಾಲ್ಕು ತಿಂಗಳುಗಳಲ್ಲಿ ಸುಮಾರು 700 ಕ್ಕೂ ಹೆಚ್ಚಿನ ಜನ ಬೀದಿ ನಾಯಿಗಳ ಕಡಿತಕ್ಕೆ ಒಳಗಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಮುಂಬರುವ ಡಿಸೆಂಬರ್ 10 ರವರೆಗೆ ಅತಿ ಹೆಚ್ಚು ನಾಯಿಗಳನ್ನು ಹತ್ಯೆ ಮಾಡುವ ಸಂಸ್ಥೆಗಳಿಗೆ ಚಿನ್ನದ ನಾಣ್ಯಗಳನ್ನು ನೀಡುವುದಾಗಿ ಕೇರಳದ ಪ್ರಮುಖ ಕಾಲೇಜಿನ ವಿದ್ಯಾರ್ಥಿ ಸಂಘಟನೆ ಪ್ರಕಟಿಸಿದೆ
 
ನಾಯಿಗಳಿಂದ ರಕ್ಷಣೆ ಹೊಂದಲು ಏರ್‌ಗನ್‌ಗಳನ್ನು ವಿತರಿಸಲಾಗುವುದು ಎಂದು ಸಂಘಟನೆ ಹೇಳಿಕೆ ನೀಡಿತ್ತು.ಇದೀಗ ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಸರಕಾರ ಕೂಡಾ ಸ್ಥಳೀಯ ಸಂಸ್ಥೆಗಳೊಂದಿಗೆ ಕೈ ಜೋಡಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ