ಹಿಂದೂಗಳು ಕಾನ್ವೆಂಟ್‌ಗೆ ಬರದಿದ್ದರೆ ಕ್ರಿಶ್ಚಿಯನ್ನರಿಗೆ ಹಿತ

ಗುರುವಾರ, 9 ಏಪ್ರಿಲ್ 2015 (17:19 IST)
ಅಲ್ಪಸಂಖ್ಯಾತ ಸಂಸ್ಥೆಗಳು ನಡೆಸುವ ಕಾನ್ವೆಂಟ್ ಶಾಲೆಗಳಿಗೆ ಹಿಂದೂಗಳು ತಮ್ಮ ಮಕ್ಕಳನ್ನು ಕಳುಹಿಸಲು ಬಯಸದಿದ್ದರೆ, ಅದು ನಮ್ಮ ಮಟ್ಟಿಗೆ ಅದು ಉತ್ತಮ ಸಂಗತಿಯೇ, ಇದರಿಂದ ಕ್ಯಾಥೋಲಿಕ್ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದು ಸುಲಭವಾಗುತ್ತದೆ ಎಂದು ಗೋವಾ ವಿಕಾಸ್ ಪಕ್ಷದ ಶಾಸಕರಾದ ಕೈಟು ಸಿಲ್ವಾ ಹೇಳಿದ್ದಾರೆ

ವರದಿಗಾರರ ಜತೆ ಮಾತನಾಡುತ್ತಿದ್ದ ಕೈಟು ಸಿಲ್ವಾ, "ಹಿಂದೂ ಪೋಷಕರು ಕಾನ್ವೆಂಟ್‌ಗಳಿಗೆ ತಮ್ಮ ಮಕ್ಕಳನ್ನು ಕಳುಹಿಸದಿದ್ದರೆ. ಅದು ನಮಗೆ ಉತ್ತಮವೇ. ಹಾಗಾದಾಗ ಕ್ಯಾಥೋಲಿಕ್ ವಿದ್ಯಾರ್ಥಿಗಳಿಗೆ ಹೆಚ್ಚಿನ ಸೀಟುಗಳು ದೊರೆಯುತ್ತವೆ", ಎಂದು ತಿಳಿಸಿದ್ದಾರೆ. 
 
ಗೋವಾದ ಕ್ಯಾಬಿನೇಟ್ ಸಚಿವರಾದ ದೀಪಕ್ ಧವಳೀಕರ್ ಮತ್ತು ಅವರ ಪತ್ನಿಯ ಹೇಳಿಕೆಗೆ ಸಿಲ್ವಾ ಈ ರೀತಿ ಪ್ರತಿಕ್ರಿಯಿಸಿದ್ದಾರೆ. 
 
ಮಕ್ಕಳನ್ನು ಕಾನ್ವೆಂಟ್‌ಗೆ ಕಳುಹಿಸಿದರೆ ಅವರು ಹಿಂದೂ ಸಂಸ್ಕೃತಿಯಿಂದ ದೂರವಾಗುತ್ತಾರೆ. ಆದ್ದರಿಂದ ನಿಮ್ಮ ಮಕ್ಕಳನ್ನು  ಅಲ್ಪಸಂಖ್ಯಾತ ಸಂಸ್ಥೆಗಳಿಂದ ನಡೆಸಲ್ಪಡುವ ಕಾನ್ವೆಂಟ್‌ಗಳಿಗೆ ಕಳುಹಿಸದಿರಿ ಎಂದು ಧವಳೀಕರ್ ದಂಪತಿಗಳು  ಹಿಂದೂ ಸಮುದಾಯದವರಲ್ಲಿ ಮನವಿ ಮಾಡಿದ್ದರು. 

ವೆಬ್ದುನಿಯಾವನ್ನು ಓದಿ