ವಿಶಿಷ್ಠ ರೀತಿಯಲ್ಲಿ ಕಲಾಂಗೆ ಗೌರವ ಸಲ್ಲಿಸಿದ ಗೂಗಲ್

ಗುರುವಾರ, 30 ಜುಲೈ 2015 (13:28 IST)
ಮೆಚ್ಚಿನ ಕಲಾಂ ನಿಧನಕ್ಕೆ ಭಾರತವಷ್ಟೇ ಅಲ್ಲದೇ ವಿಶ್ವದಾದ್ಯಂತ ಶೋಕ ವ್ಯಕ್ತವಾಗುತ್ತಿದೆ. ಪ್ರಮುಖ ಸರ್ಚ್ ಎಂಜಿನ್ ಗೂಗಲ್ ಸಹ ಕ್ಷಿಪಣಿ ಮನುಷ್ಯನ ನಿಧನಕ್ಕೆ ವಿಶಿಷ್ಟ ರೀತಿಯಲ್ಲಿ ಸಂತಾಪ ಸೂಚಿಸಿದೆ.

ಹೋಂ ಪೇಜ್‌ನಲ್ಲಿ ಗೂಗಲ್ ಸರ್ಚ್ ಬಾಕ್ಸ್ ಕೆಳಗೆ ಕಪ್ಪು ಬಣ್ಣದ ರಿಬ್ಬನ್‌ನ್ನು ಗೂಗಲ್ ಡಿಸ್‌ಪ್ಲೇ ಮಾಡಿದೆ. ಅದರ ಮೇಲೆ ಮೌಸ್‌ ಇಟ್ಟು ಕ್ಲಿಕ್ ಮಾಡಿದರೆ ' ಇನ್ ಮೆಮೊರಿ ಆಫ್ ಎಪಿಜೆ ಅಬ್ದುಲ್ ಕಲಾಂ' ಎಂಬ ಲೈನ್ ಕಂಡುಬರುತ್ತದೆ. ಈ ರೀತಿಯಲ್ಲಿ ಗೂಗಲ್ ಕಲಾಂ ನಿಧನಕ್ಕೆ ಸಂತಾಪ ಸೂಚಿಸಿದೆ. 
 
ಕಳೆದ ಮೂರು ದಿನಗಳ ಹಿಂದೆ ಶಿಲ್ಲಾಂಗ್‌ನಲ್ಲಿ ಉಪನ್ಯಾಸ ನೀಡುತ್ತಿದ್ದ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದ ಕಲಾಂ ಅವರ ಅಂತ್ಯಕ್ರಿಯೆ ಇಂದು ಅವರ ತವರು ರಾಮೇಶ್ವರಂನಲ್ಲಿ ನಡೆಯಿತು. ಪ್ರಧಾನಿ ಮೋದಿ, ರಕ್ಷಣಾ ಸಚಿವ ಮನೋಹರ ಪರಿಕ್ಕರ್, ವೆಂಕಯ್ಯನಾಯ್ಡು, ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ, ಕರ್ನಾಟಕ, ಕೇರಳ, ಆಂಧ್ರಪ್ರದೇಶದ ಮುಖ್ಯಮಂತ್ರಿಗಳು ಸೇರಿದಂತೆ ಹಲವಾರು ಗಣ್ಯರು ಅಗಲಿದ ಮಹಾ ಆತ್ಮಕ್ಕೆ ಅಂತಿಮ ನಮನ ಸಲ್ಲಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ