ಲೋಗೋ ಮರುವಿನ್ಯಾಸಗೊಳಿಸಿದ ಗೂಗಲ್

ಬುಧವಾರ, 2 ಸೆಪ್ಟಂಬರ್ 2015 (12:57 IST)
ಇಂಟರ್‌ನೆಟ್ ದಿಗ್ಗಜ ಸಂಸ್ಥೆ ಗೂಗಲ್ ತನ್ನ  ಸರ್ಚ್ ಎಂಜಿನ್ ಗೂಗಲ್ ಲೋಗೋವನ್ನು ಮರುವಿನ್ಯಾಸಗೊಳಿಸಿದೆ. ಈ ನೂತನ ಲೋಗೋ ನಾಲ್ಕು ಬಣ್ಣಗಳಲ್ಲಿದ್ದು  ದುಂಡಗಿನ ಅಕ್ಷರಗಳನ್ನು ಹೊಂದಿದೆ. ಈ ಮೂಲಕ ಬರೊಬ್ಬರಿ 17 ವರ್ಷಗಳ ಬಳಿಕ ಗೂಗಲ್ ತನ್ನ ಲೋಗೋದಲ್ಲಿ  ದೊಡ್ಡ ಬದಲಾವಣೆ ತಂದಂತಾಗಿದೆ. 
 

 
ಲೋಗೋದಲ್ಲಿರುವ ಪದಗಳು ದಪ್ಪ ಅಕ್ಷರದಲ್ಲಿದಲ್ಲಿದ್ದು, ಇ ಪದವನ್ನು ಸ್ವಲ್ಪ ಓರೆಯಾಗಿಸಲಾಗಿದೆ. ಪದ ನಾಲ್ಕು ಬಣ್ಣಗಳಲ್ಲಿದ್ದು ಮೊದಲು ಬರುವ ಕ್ಯಾಪಿಟಲ್ 'ಜಿ' ಮತ್ತು ಸ್ಮಾಲ್ 'ಜಿ' ನೀಲಿ ಬಣ್ಣಗಳಲಲಿವೆ. ಒಂದು 'ಓ' ಮತ್ತು ಕೊನೆಯಲ್ಲಿ ಬರುವ 'ಇ' ಕೆಂಪು ಬಣ್ಣಗಳಲ್ಲಿದ್ದು ಇನ್ನೊಂದು 'ಓ' ಹಳದಿ ಮತ್ತು 'ಎಲ್' ಹಸಿರು ಬಣ್ಣದಲ್ಲಿವೆ. 1998ರಲ್ಲಿ ಸ್ಥಾಪನೆಯಾಗಿರುವ ಗೂಗಲ್ ಕಂಪೆನಿ ಇದುರೆಗು 5 ಬಾರಿ ತನ್ನ ಲೋಗೋವನ್ನು ಬದಲಾಯಿಸಿದೆ.
 
ಸದ್ಯ ಗೂಗಲ್ ಹೋಮ್‌‌ಪೇಜ್‌ನ್ನು ತೆರೆದರೆ ಹಳೆಯ ಲೋಗೋವನ್ನು ಅಳಿಸಿ ನೂತನ ಕಲರ್‌ಪುಲ್ ಲೋಗೋವನ್ನು ಬಿಡಿಸುತ್ತಿರುವ ಎನಿಮೇಶನ್ ಕಂಡು ಬರುತ್ತಿದೆ.
 
ತಂತ್ರಜ್ಞಾನ ಜಗತ್ತು ಬದಲಾಗಿದೆ. ಗೂಗಲ್ ಕೂಡ ಅಗಾಧವಾಗಿ ವಿಸ್ತಾರಗೊಂಡಿದೆ. ಹಾಗಾಗಿ ಲೋಗೋ ಬದಲಾಯಿಸಲು ಇದು ಸೂಕ್ತ ಸಮಯ ಎಂದು ಕಂಪನಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ.

ವೆಬ್ದುನಿಯಾವನ್ನು ಓದಿ