ಗೂಗಲ್ ಸರ್ಚ್ ಕಿಂಗ್ ಅಮಿತ್ ಸಿಂಘಾಲ್ ಮಾಸಾಂತ್ಯಕ್ಕೆ ನಿವೃತ್ತಿ

ಗುರುವಾರ, 4 ಫೆಬ್ರವರಿ 2016 (19:59 IST)
ಸರ್ಚ್ ಇಂಜಿನ್‌ನ ಜಾಗತಿಕ ದೈತ್ಯ ಸಂಸ್ಥೆಯಾದ ಗೂಗಲ್‌ ಮಹತ್ವದ ಗುರಿಯನ್ನು ತಲುಪುವಲ್ಲಿ ಮಹತ್ವದ ಪಾತ್ರವಹಿಸಿದ ಹಿರಿಯ ಉಪಾಧ್ಯಕ್ಷ ಅಮಿತ್ ಸಿಂಗಾಲ್ ಮಾಸಾಂತ್ಯಕ್ಕೆ ನಿವೃತ್ತರಾಗಲಿದ್ದಾರೆ.
ಗೂಗಲ್‌ನ ಆರ್ಟಿಫಿಶೀಯಲ್ ಇಂಟಲಿಜೆನ್ಸ್ ಎಫರ್ಟ್ಸ್ ವಿಭಾಗದ ಉಪಾಧ್ಯಕ್ಷ ಜಾನ್ ಗಿಯಾನೆಂಡ್ರಿಯಾ ಸಿಂಘಾಲ್ ಸ್ಥಾನವನ್ನು ತುಂಬಲಿದ್ದಾರೆ. 
 
ಗೂಗಲ್ ಕಂಪೆನಿಯ ಬೆಳವಣಿಗೆಯಲ್ಲಿ ಅವಿರತ ಶ್ರಮವಹಿಸಿದ ಸಿಂಘಾಲ್ ಅವರನ್ನು, ಸರ್ಚ್ ಇಂಜಿನ್‌ನಲ್ಲಿ ಸಲ್ಲಿಸಿದ ಅಮೋಘ ಸೇವೆಗಾಗಿ 2001-2006ರವರೆಗೆ ಗೂಗಲ್ ಫೆಲೋ ಎನ್ನುವ ಗೌರವಕ್ಕೆ ಪಾತ್ರರಾಗಿದ್ದರು. ಮೊಬೈಲ್‌ನಲ್ಲಿ ಸರ್ಚ್ ಇಂಜಿನ್ ಫಲಿತಾಂಶಗಳು ಪರಿಣಾಮಕಾರಿಯಾಗಿ ಬರಲು ಆಕ್ರಮಣಕಾರಿಯಾಗಿ ಸೇವೆ ಸಲ್ಲಿಸಿದ್ದರು. 
 
ಗೂಗಲ್ ಹಿರಿಯ ಉಪಾಧ್ಯಕ್ಷ ಮತ್ತು ಸಾಫ್ಟ್‌ವೇರ್ ಇಂಜಿನಿಯರ್ ಸ್ಥಾನವನ್ನು ಅಲಂಕರಿಸಿದ್ದ ಅಮಿತ್ ಸಿಂಘಾಲ್, ಗೂಗಲ್ ಕೋರ್ ತಂಡದ ಮುಖ್ಯಸ್ಥರಾಗಿಯೂ ಸೇವೆ ಸಲ್ಲಿಸಿದ್ದಾರೆ. ಸಿಂಘಾಲ್ ಫೆಬ್ರವರಿ 26 ರಂದು ನಿವೃತ್ತರಾಗಲಿದ್ದಾರೆ. 
 
ಉತ್ತರಪ್ರದೇಶದ ಝಾಂಸಿ ನಗರದಲ್ಲಿ 1968ರ ಸೆಪ್ಟೆಂಬರ್‌ನಲ್ಲಿ ಜನಿಸಿದ ಸಿಂಘಾಲ್, ರೂರ್‌ಕೆಯಿಂದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಐಐಟಿ ಪದವಿ ಪಡೆದಿದ್ದರು. ನಂತರ ಅಮೆರಿಕೆಗೆ ತೆರಳಿ ಮಿನ್ನಿಸೋಟಾ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ಸೈನ್ಸ್‌ನಲ್ಲಿ ಎಂಎಸ್ ಪದವಿ ಪಡೆದರು. 
 
ಕೊರ್ನೆಲ್ ವಿಶ್ವವಿದ್ಯಾಲಯದಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಿದ ಸಿಂಘಾಲ್, ಪಿಎಚ್‌ಪಿ ಪದವಿ ಪಡೆಯುವಲ್ಲಿ ಸಫಲರಾದರು. ನಂತರ ಸರ್ಚ್ ವಿಭಾಗದಲ್ಲಿ ಸೇವೆ ಸಲ್ಲಿಸಲು 1996ರಲ್ಲಿ ಬೆಲ್ ಲ್ಯಾಬ್ಸ್ ಸಂಸ್ಥೆಗೆ ಸೇರ್ಪಡೆಯಾದರು.
 
ಕಳೆದ 2000ರಲ್ಲಿ ತಮ್ಮ ಆತ್ಮಿಯ ಗೆಳೆಯ ಕೃಷ್ಣ ಭಾರತ್ ಸಲಹೆ ಮೇರೆಗೆ ಗೂಗಲ್ ಕೋರ್ ಸರ್ಚ್ ಕ್ವಾಲಿಟಿ ವಿಭಾಗಕ್ಕೆ ಉದ್ಯೋಗಿಯಾಗಿ ಸೇವೆ ಆರಂಭಿಸಿದರು. ಗೂಗಲ್ ಸರ್ಚ್ ಅಲ್ಗೊರಿದಮ್ಸ್‌ಗೆ ಸಿಂಘಾಲ್ ಮತ್ತು ಅವರ ತಂಡದ ಶ್ರಮ ಕಾರಣವಾಗಿತ್ತು. 
 
ಪ್ರಶಸ್ತಿಗಳು 
 
ಕಳೆದ 2011ರಲ್ಲಿ ಫೆಲೋ ಆಫ್ ದಿ ಅಸೋಸಿಯೇಶನ್ ಫಾರ್ ಕಂಪ್ಯೂಟಿಂಗ್ ಮಷಿನರಿ.
 
ತಂತ್ರಜ್ಞಾನ ಕ್ಷೇತ್ರದಲ್ಲಿ ಅತಿ ಬುದ್ದಿವಂತ ತಂತ್ರಜ್ಞ ಎಂದು ಫಾರ್ಚೂನ್‌ ಸಂಸ್ಥೆಯಿಂದ ಬಿರುದು.
 
ಸೈನ್ಸ್ ಮತ್ತು ತಂತ್ರಜ್ಞಾನದಲ್ಲಿ ತೋರಿದ ಸಾಧನೆಗಾಗಿ ಏಷ್ಯನ್ ಅವಾರ್ಡ್ಸ್ ಪ್ರಶಸ್ತಿ 
 
ನ್ಯಾಷನಲ್ ಆಕಾಡೆಮಿ ಆಪ್ ಇಂಜಿನಿಯರಿಂಗ್ ಸದಸ್ಯತ್ವ ಸ್ಥಾನ 
 

ವೆಬ್ದುನಿಯಾವನ್ನು ಓದಿ