ಯಾಕೂಬ್‌ಗೆ ಗಲ್ಲು: ಕೇಂದ್ರ ಸರಕಾರ ಮಾನವೀಯತೆ ಮೆರೆದಿದೆ ಎಂದು ಆರೆಸ್ಸೆಸ್ ನಾಯಕ

ಶನಿವಾರ, 1 ಆಗಸ್ಟ್ 2015 (19:41 IST)
1993ರ ಮುಂಬೈ ಸ್ಫೋಟದ ಆರೋಪಿ ಯಾಕೂಬ್‌ ಮೆಮೋನ್‌‌‌ಗೆ ಕುಟುಂಬವನ್ನು ಭೇಟಿ ಮಾಡಲು ಅವಕಾಶ ಕೊಟ್ಟು ಕೇಂದ್ರ ಸರಕಾರ ಮಾನವೀಯತೆಯನ್ನು ಮೆರೆದು ಮೆಮೋನ್‌ ಆತ್ಮಕ್ಕೆ ಶಾಂತಿಕ ನೀಡಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹೇಳಿಕೆ ನೀಡಿದೆ.
 
ಆರೆಸ್ಸಸ್ ಹಿರಿಯ ನಾಯಕ ಇಂದ್ರೇಶ್ ಕುಮಾರ್ ಮಾತನಾಡಿ, ಮೃತದೇಹವನ್ನು ತೆಗೆದುಕೊಂಡು ಹೋಗಲು ನಾಗ್ಪುರ್‌ನಲ್ಲಿ ಮೆಮೋನ್  ಕುಟುಂಬಕ್ಕೆ ಅವಕಾಶ ನೀಡಿದ್ದಲ್ಲದೇ ಅಂತ್ಯಸಂಸ್ಕಾರದಲ್ಲಿ ಇತರರು ಪಾಲ್ಗೊಳ್ಳುವಂತೆ ಸಹಕರಿಸಿ ಪ್ರಜಾಪ್ರಭುತ್ವದಲ್ಲಿರುವಂತೆ ಕೇಂದ್ರ ಸರಕಾರ ಮಾನವೀಯತೆಯಿಂದ ವರ್ತಿಸಿದೆ ಎಂದು ತಿಳಿಸಿದ್ದಾರೆ.
 
ಸರಕಾರದ ಮಾನವೀಯ ವರ್ತನೆಯಿಂದಾಗಿ ದೇಶದ ಯಾವುದೇ ಬಾಗದಲ್ಲಿ ಅಹಿತಕರ ಘಟನೆಗಳು ನಡೆಯದಿರುವುದಕ್ಕೆ ಸಾಕ್ಷಿಯಾಗಿದೆ ಎಂದರು.
 
ಯಾಕೂಬ್‌ ಮೆಮೋನ್‌ನನ್ನು ಗಲ್ಲಿಗೇರಿಸಿದ ನಂತರ ದೇಶದಲ್ಲಿ ಅಹಿತಕರ ಘಟನೆಗಳು ನಡೆಯಬಹುದು ಎನ್ನುವ ಭಾವನೆ ಜನರಲ್ಲಿತ್ತು. ನ್ಯಾಯಾಂಗ ಪ್ರಕರಣಕ್ಕೆ ತಕ್ಕಂತೆ ತೀರ್ಪು ನೀಡುತ್ತದೆ. ಆದರೆ ತೀರ್ಪಿನಿಂದ ಎದುರಾಗುವ ಅಹಿತಕರ ಘಟನೆಗಳನ್ನು ಸರಕಾರವೇ ನಿರ್ವಹಿಸಬೇಕಾಗುತ್ತದೆ ಎಂದು ಹೇಳಿದರು.  
 
ಸಂಸತ್ ಮೇಲಿನ ದಾಳಿ ರೂವಾರಿಯಾಗಿದ್ದ ಅಫ್ಜಲ್‌ ಗುರು ಗಲ್ಲಿಗೇರಿಸಿದ ಸಂದರ್ಭದಲ್ಲಿ ಯುಪಿಎ ಸರಕಾರ ಇಂತಹ ಮಾನವೀಯತೆ ತೋರಲಿಲ್ಲ ಎಂದು ಆರೆಸ್ಸೆಸ್ ಮುಖಂಡ ಇಂದ್ರೇಶ್ ಕುಮಾರ್ ತಿರುಗೇಟು ನೀಡಿದರು.  
 

ವೆಬ್ದುನಿಯಾವನ್ನು ಓದಿ