ಕ್ಯಾನ್ಸರ್‌ಗಿಂತ ಅಪಾಯಕಾರಿ ಭ್ರಷ್ಟಾಚಾರದ ವಿರುದ್ಧ ಕಠಿಣ ಕ್ರಮ: ಮೋದಿ

ಮಂಗಳವಾರ, 19 ಆಗಸ್ಟ್ 2014 (18:49 IST)
ಕೈಥಾಲ್(ಹರ್ಯಾಣ): ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಪ್ರವೇಶಿಸಿರುವ ಭ್ರಷ್ಟಾಚಾರದ ವಿರುದ್ಧ ತಮ್ಮ ಸರ್ಕಾರ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸುತ್ತದೆ ಎಂದು ಪ್ರಧಾನಮಂತ್ರಿ ಹೇಳಿದ್ದಾರೆ. ಭ್ರಷ್ಟಾಚಾರ ದೇಶದಲ್ಲಿ ಅಪಾಯಕಾರಿ ಕಾಯಿಲೆಯಾಗಿ ಪರಿಣಮಿಸಿದ್ದು, ಕ್ಯಾನ್ಸರ್‌ ರೋಗಕ್ಕಿಂತ ಕೆಟ್ಟದಾಗಿದ್ದು, ದೇಶವನ್ನೇ ಹಾಳು ಮಾಡುತ್ತಿದೆ. ದೇಶ ಭ್ರಷ್ಟಾಚಾರ ಮುಂತಾದ ಪಿಡುಗುಗಳನ್ನು ಹೆಚ್ಚು ಕಾಲ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಮೋದಿ ಹೇಳಿದರು.

ಹರ್ಯಾಣ ಮತ್ತು ರಾಜಸ್ಥಾನ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತ್ತಿದ್ದರು.ನೀವು ಭ್ರಷ್ಟಾಚಾರ ಮುಕ್ತ ದೇಶವನ್ನು ಬಯಸಿದ್ದೀರಾ. ಭ್ರಷ್ಟಾಚಾರ ನಿವಾರಣೆಗೆ ಕಠಿಣ ಹೆಜ್ಜೆಗಳನ್ನು ನಾವು ಇಟ್ಟಿಲ್ಲವೇ, ಹಾಗಾದರೇ ನಾವು ಇಡುತ್ತೇವೆ ಎಂದು ಮೋದಿ ಮಾರ್ಮಿಕವಾಗಿ ಹೇಳಿದರು. ಆಗಸ್ಟ್ 15ರಂದು ಭಾಷಣದಲ್ಲಿ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸದಿದ್ದಕ್ಕೆ ತಮ್ಮನ್ನು ಟೀಕಿಸಿದವರನ್ನು ಉಲ್ಲೇಖಿಸಿ ಮಾತನಾಡಿದ ಅವರು, ನಾನು ಅವರಿಗೆ ನೆನಪಿಸುತ್ತೇನೆ, ನಾನು ನಮ್ಮ ದೇಶವನ್ನು ಹಾಳುಮಾಡಿದ 'ಮೇರಾ ಕ್ಯಾ, ಮುಜೆ ಕ್ಯಾ' ಭ್ರಷ್ಟಾಚಾರದ ಸಂಸ್ಕೃತಿಯ ಬಗ್ಗೆ ಮಾತನಾಡಿದ್ದೇನೆ. ಅದು ಬದಲಾಗಬೇಕು ಎಂದರು.

ಭ್ರಷ್ಟಾಚಾರದಲ್ಲಿ ತೊಡಗಿದವರಿಗೆ ಎಚ್ಚರಿಸಿದ ಪ್ರಧಾನಿ, ಲಂಚಗಳನ್ನು ನೀಡುವ ಮುಂಚಿನ ಮನೋಭಾವ ಮತ್ತು  ಕಳಪೆ ಗುಣಮಟ್ಟದ ಕೆಲಸ ಮಾಡಿ ತಪ್ಪಿಸಿಕೊಳ್ಳುವುದನ್ನು ಸಹಿಸಲಾಗುವುದಿಲ್ಲ. ರಸ್ತೆಗಳ ಮೇಲೆ ಕಪ್ಪು ಟಾರು ಹಾಕಿದ ನಂತರ ಮೊದಲ ಮಳೆಯಲ್ಲೇ ತೊಳೆದುಹೋಗುವ ಗುತ್ತಿಗೆದಾರರ ಸಂಸ್ಕೃತಿ ಇನ್ನು ಮುಂದೆ ಕೆಲಸ ಮಾಡುವುದಿಲ್ಲ ಎಂದು ಮೋದಿ ಎಚ್ಚರಿಸಿದರು.ದೇಶವನ್ನು ಮುನ್ನಡೆಸಲು ಮತ್ತು ಉದ್ಯೋಗ ಸೃಷ್ಟಿಗೆ ಅಭಿವೃದ್ಧಿ ಮಾತ್ರ ಏಕಮಾತ್ರ ಮಾರ್ಗವಾಗಿದ್ದು, ಅಭಿವೃದ್ಧಿ ನಮ್ಮ ಅನೇಕ ಸಮಸ್ಯೆಗಳಿಗೆ ಪರಿಹಾರ ಎಂದು ನುಡಿದರು. 

ವೆಬ್ದುನಿಯಾವನ್ನು ಓದಿ