ಎರಡು ಪ್ರಶಸ್ತಿಗಳ ಹೆಸರಿಂದ ಇಂದಿರಾ, ರಾಜೀವ್ ಗಾಂಧಿ ಹೆಸರು ಕಟ್

ಮಂಗಳವಾರ, 21 ಏಪ್ರಿಲ್ 2015 (16:19 IST)
ಕೇಂದ್ರ ಸರಕಾರ ಎರಡು ಪ್ರಶಸ್ತಿಗಳ ಹೆಸರನ್ನು ಇತ್ತೀಚಿಗೆ ಬದಲಾಯಿಸಿದ್ದು, ವಿರೋಧ ಪಕ್ಷ ಕಾಂಗ್ರೆಸ್‌ನ್ನು ಕೆರಳುವಂತೆ ಮಾಡಿದೆ.

 
ವರದಿಗಳ ಪ್ರಕಾರ ಇಂದಿರಾ ಗಾಂಧಿ ರಾಜ್ಯಸಭಾ ಪುರಸ್ಕಾರ ಮತ್ತು ರಾಜೀವ್  ಗಾಂಧಿ ರಾಷ್ಟ್ರೀಯ ಜ್ಞಾನ ವಿಜ್ಞಾನ ಮೌಲಿಕ್ ಪುಸ್ತಕ ಲೇಖನ ಪುರಸ್ಕಾರ ಪ್ರಶಸ್ತಿಗಳು  ರಾಜಭಾಷಾ ಕೀರ್ತಿ ಪುರಸ್ಕಾರ್ ಮತ್ತು ರಾಜಭಾಷಾ ಗೌರವ ಪುರಸ್ಕಾರ ಎಂಬ ಹೊಸ ಹೆಸರನ್ನು ಪಡೆದುಕೊಂಡಿವೆ. 
 
ಸರ್ಕಾರದಲ್ಲಿ ಹಿಂದಿ ಭಾಷೆಯ ಪ್ರಗತಿಶೀಲ ಬಳಕೆಗಾಗಿ ಪ್ರತಿವರ್ಷ 'ಹಿಂದಿ ದಿನ' ದಂದು ಗೃಹ ಸಚಿವಾಲಯ ಈ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. 
 
ರಾಷ್ಟ್ರೀಯ ದಿನಪತ್ರಿಕೆಯೊಂದರಲ್ಲಿ ಬಂದಿರುವ ವರದಿಯ ಪ್ರಕಾರ ಈ ಬದಲಾದ ಹೆಸರುಗಳು ಕಳೆದ ತಿಂಗಳು ಮಾರ್ಚ್ 25 ರಿಂದ ಪರಿಗಣಿಸಲ್ಪಡುತ್ತವೆ ಎಂದು ಗೃಹ ಸಚಿವಾಲಯ ಆದೇಶ ಹೊರಡಿಸಿದೆ. 
 
ತನ್ನ ಹಿರಿಯ ನಾಯಕರಿಬ್ಬರ ಹೆಸರುಗಳನ್ನು ಪ್ರಶಸ್ತಿಯಿಂದ ಕೈ ಬಿಟ್ಟಿರುವುದು ಕಾಂಗ್ರೆಸ್ ಪಕ್ಷದ ಆಕ್ರೋಶಕ್ಕೆ ಕಾರಣವಾಗಿದ್ದು ಇದು "ರಾಜಕೀಯ ಹಗೆಕಾರುವಿಕೆ" ಎಂದು ಪಕ್ಷ ಆರೋಪಿಸಿದೆ. 

ವೆಬ್ದುನಿಯಾವನ್ನು ಓದಿ