ಮಹಿಳೆಯರ ಸುರಕ್ಷತೆಗಾಗಿ ಮೊಬೈಲ್ ಫೋನ್​ಗಳಲ್ಲಿ ಪ್ಯಾನಿಕ್ ಬಟನ್!

ಶನಿವಾರ, 3 ಅಕ್ಟೋಬರ್ 2015 (16:25 IST)
ಮಹಿಳಾ ಸುರಕ್ಷತೆಗೆ ಒತ್ತುಕೊಟ್ಟಿರುವ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರ ಈಗ ಮೊಬೈಲ್ ಫೋನ್​ಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸಲು ಚಿಂತನೆ ನಡೆಸಿದೆ.  ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಇದನ್ನು ಸ್ಪಷ್ಟಪಡಿಸಿದ್ದಾರೆ.


 
'ಮೊಬೈಲ್ ಫೋನ್‌ಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಸುವುದಕ್ಕೆ ಸರ್ಕಾರ ಚಿಂತನೆ ನಡೆಸಿದ್ದು ಎಲ್ಲ ಮೊಬೈಲ್ ಫೋನ್ ತಯಾರಿಕಾ ಸಂಸ್ಥೆಗಳ ಬಳಿ ಈ ಕುರಿತು ಚರ್ಚಿಸಿದ್ದೇವೆ. ಸರ್ಕಾರದ ಸೂಚನೆಗೆ ಮೊಬೈಲ್ ಕಂಪನಿಗಳು ಧನಾತ್ಮಕವಾಗಿ ಸ್ಪಂದಿಸಿದ್ದು, ಕೆಲ ತಿಂಗಳುಗಳಲ್ಲಿ ಪ್ಯಾನಿಕ್ ಬಟನ್ ಅಳವಡಿಕೆ ಸಾಧ್ಯವಾಗಲಿದೆ', ಎಂದು ಸಚಿವೆ ಭರವಸೆ ನೀಡಿದ್ದಾರೆ. 
 
ಪ್ರಸ್ತಾವನೆಯ ಪ್ರಕಾರ, 'ಸಂಕಷ್ಟದಲ್ಲಿ ಸಿಲುಕಿರುವ ಮಹಿಳೆಯರು ಪ್ಯಾನಿಕ್ ಬಟನ್ ಒತ್ತುತ್ತಿದ್ದಂತೆ ಮೊದಲೇ ಸೆಟ್ ಮಾಡಲ್ಪಟ್ಟ ಸಂಖ್ಯೆಗಳಿಗೆ ಸಂದೇಶ ರವಾನೆಯಾಗುತ್ತದೆ. ಅವರಿರುವ ಸ್ಥಳದ ಬಗ್ಗೆಯೂ ಮಾಹಿತಿ ದೊರೆಯುತ್ತದೆ', ಎಂದು ಮೇನಕಾ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ