ಕನ್ನಡಿಗನಿಗೆ ಗ್ರ್ಯಾಮಿ ಪ್ರಶಸ್ತಿ

ಸೋಮವಾರ, 9 ಫೆಬ್ರವರಿ 2015 (17:46 IST)
ಭಾರತ ಮೂಲದ ಸಂಗೀತ ನಿರ್ದೇಶಕ ರಿಕಿ ಕೆಜ್ ಈ ಬಾರಿಯ ಗ್ರ್ಯಾಮಿ ಪ್ರಶಸ್ತಿ ಗೆಲ್ಲುವ ಮೂಲಕ ದೇಶಕ್ಕೆ ಕೀರ್ತಿ ತಂದಿದ್ದಾರೆ. 
ಲಾಸ್ ಎಂಜಲೀಸ್‌ನಲ್ಲಿ ಆಯೋಜಿತವಾಗಿದ್ದ 57ನೇ ಗ್ರ್ಯಾಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ, ಬೆಂಗಳೂರು ಮೂಲದ ರಿಕಿ ಕೆಜ್ ಆಫ್ರಿಕಾದ ಕೊಳಲು ವಾದಕ ವೊಟರ್‌ ಕೆಲರ್‌ಮನ್‌ ಅವರ ಜತೆಗೆ ಪ್ರಶಸ್ತಿ ಸ್ವೀಕರಿಸಿದರು.
 
ರಿಕಿ ಮತ್ತು ಕೆಲರ್‌ಮನ್ ಜಂಟಿಯಾಗಿ ಸಂಗೀತ ಸಂಯೋಜನೆ ಮಾಡಿದ್ದ ‘ವಿಂಡ್ಸ್‌ ಆಫ್‌ ಸಂಸಾರ’ ಆಲ್ಬಮ್‌ಗೆ ಈ ಪ್ರಶಸ್ತಿ ಲಭ್ಯವಾಗಿದೆ. 
 
57ನೇ ಗ್ರ್ಯಾಮಿ ಪ್ರಶಸ್ತಿಯ ಹೊಸ ಜಮಾನಾದ ಉತ್ತಮ ಆಲ್ಬಂ ವಿಭಾಗದಲ್ಲಿ ರಿಕಿ ಅವರಿಗೆ ಈ ಪ್ರಶಸ್ತಿ ಸಂದಿದೆ. 
 
ಈ ಹಿಂದೆ ಭಾರತೀಯ ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ ಎ.ಆರ್‌.ರಹಮಾನ್‌ ಅವರು ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದರು.

ವೆಬ್ದುನಿಯಾವನ್ನು ಓದಿ