ಭಾರತದಲ್ಲಿ ಅಸಹಿಷ್ಣುತೆ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ: ಶಬಾನಾ ಆಜ್ಮಿ

ಶುಕ್ರವಾರ, 20 ನವೆಂಬರ್ 2015 (20:31 IST)
ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಹೋರಾಟ ನಡೆಸುತ್ತಿರುವವರಿಗೆ ಬೆಂಬಲ ಸೂಚಿಸಿದ ಖ್ಯಾತ ಬಾಲಿವುಡ್ ನಟಿ ಶಬಾನಾ ಆಜ್ಮಿ, ಹೆಚ್ಚುತ್ತಿರುವ ಅಸಹಿಷ್ಣುತೆ ಕಳವಳಕಾರಿಯಾಗಿದೆ. ಇಂತಹ ಶಕ್ತಿಗಳನ್ನು ಬಗ್ಗು ಬಡಿಯಬೇಕು ಎಂದು ಹೇಳಿದ್ದಾರೆ.
  
ವುಮೆನ್ ಇನ್‌ ದಿ ವರ್ಲ್ಡ್ ಇಂಡಿಯಾ ಶೃಂಗಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಆಜ್ಮಿ, ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಕಳವಳಕಾರಿಯಾಗಿದೆ. ಇಂತಹ ದುಷ್ಟಶಕ್ತಿಗಳನ್ನು ಬಗ್ಗುಬಡಿಯಬೇಕು ಎನ್ನುವುದು ಪ್ರಸ್ತುತ ಚರ್ಚಾ ವಿಷಯವಲ್ಲ. ಇತರರನ್ನು ಸಮುದಾಯಗಳನ್ನು ಗೌರವಿಸಬೇಕು ಎನ್ನುವುದು ಚರ್ಚಾ ವಿಷಯವಾಗಿದೆ ಎಂದು ಹೇಳಿದ್ದಾರೆ. 
 
ಜಾತ್ಯಾತೀತ ರಾಷ್ಟ್ರವಾದ ಭಾರತದಲ್ಲಿ ಪ್ರತಿಯೊಂದು ಸಮುದಾಯ ತನ್ನದೇ ಆದ ಮಹತ್ವ ಹೊಂದಿದ್ದರಿಂದ ಪರಸ್ಪರ ಗೌರವಿಸುವುದು ಅನಿವಾರ್ಯವಾಗಿದೆ ಎಂದು ಮಾಜಿ ಸಂಸದೆ ಶಬನಾ ಆಜ್ಮಿ ಅಭಿಪ್ರಾಯಪಟ್ಟಿದ್ದಾರೆ.
 
ಅಸಹಿಷ್ಣುತೆ ಮುಂದುವರಿದಿದೆ. ಆದರೆ, ಕೇಂದ್ರ ಸರಕಾರ ಯಾವ ರೀತಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎನ್ನುವ ಪ್ರಶ್ನೆ ಹಾಗೆಯೇ ಉಳಿದಿದೆ ಎಂದರು.
 
ದೇಶದ ಹಲವಾರು ಕಲಾವಿದರು ಸಾಹಿತಿಗಳು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಬಗ್ಗೆ ಧ್ವನಿ ಎತ್ತಿದ್ದಾರೆ. ದಾದ್ರಿ ಘಟನೆಯ ನಂತರ ಅನೇಕ ಕಲಾವಿದರು, ಸಾಹಿತಿಗಳು ತಮಗೆ ದೊರೆತ ರಾಷ್ಟ್ರ ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದಾರೆ ಎಂದು ಬಾಲಿವುಡ್ ನಟ ಶಬನಾ ಆಜ್ಮಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ