ಗುಜರಾತ್ ವಿಧಾನಸಭೆಯಲ್ಲಿ ಮತ್ತೆ ಮೂರನೇ ಬಾರಿಗೆ ಭಯೋತ್ಪಾದನೆ ನಿಗ್ರಹ ಮಸೂದೆ ಮಂಡನೆ

ಮಂಗಳವಾರ, 31 ಮಾರ್ಚ್ 2015 (18:49 IST)
ಗುಜರಾತ್ ಕಂಟ್ರೋಲ್ ಆಫ್ ಟೆರರಿಸಂ ಆಂಡ್ ಆರ್ಗನೈಜ್ಡ್ ಕ್ರೈಮ್‌ (ಜಿಸಿಟಿಓಸಿ) ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಪಡೆಯುವಲ್ಲಿ ವಿಫಲವಾಗಿದ್ದ ಗುಜರಾತ್ ಸರಕಾರ, ಇದೀಗ ಮತ್ತೊಮ್ಮೆ ವಿಧಾನಸಭೆಯಲ್ಲಿ ಮಸೂದೆಗೆ ಬಹುಮತ ಪಡೆದು ಮತ್ತೆ ರಾಷ್ಟ್ರಪತಿಗೆ ರವಾನಿಸಲು ಸರಕಾರ ಮುಂದಾಗಿರುವುದು ವಿವಾದಕ್ಕೆ ಕಾರಣವಾಗಿದೆ.

ಒಂದು ವೇಳೆ ಮಸೂದೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಅಂಕಿತ ದೊರೆತಲ್ಲಿ ಪೊಲೀಸರು ದೂರವಾಣಿ ಕದ್ದಾಲಿಕೆ ಮಾಡಿ ವಿವರಗಳನ್ನು ನ್ಯಾಯಾಲಯಕ್ಕೆ ಸಾಕ್ಷಿಯಾಗಿ ನೀಡಬಹುದಾಗಿದೆ.

ಮಹಾರಾಷ್ಟ್ರದ ಮಹಾರಾಷ್ಟ್ರ ಕಂಟ್ರೋಲ್ ಆಫ್ ಆರ್ಗನೈಜ್ಡ್ ಕ್ರೈಮ್ ಆಕ್ಟ್ (ಮೋಕಾ) ಮಸೂದೆಯನ್ನು ಅಂದಿನ ರಾಷ್ಟ್ರಪತಿಗಳಾಗಿದ್ದ 2004 ಮತ್ತು 2008ರಲ್ಲಿ ಅಬ್ದುಲ್ ಕಲಾಂ ಆಜಾದ್ ಮತ್ತು ಪ್ರತಿಭಾ ಪಾಟೀಲ್ ಕ್ರಮವಾಗಿ ನಿರಾಕರಿಸಿದ್ದರು.  


ಆದರೆ, ಗುಜರಾತ್ ಸರಕಾರ ಮಸೂದೆಯಲ್ಲಿ ಯಾವುದೇ ಬದಲಾವಣೆ ತಾರದೆ ವಿಪಕ್ಷಗಳ ಭಾರಿ ವಿರೋಧದ ಮಧ್ಯೆಯೂ ಮೂರನೇ ಬಾರಿಗೆ ಸದನದಲ್ಲಿ ಮಂಡಿಸಿ ಬಹುಮತ ಪಡೆದಿದೆ. ಮಸೂದೆಗೆ ತಿದ್ದುಪಡಿ ತರುವಂತೆ ವಿಪಕ್ಷಗಳು ಒತ್ತಾಯಿಸಿ ಸದನಕ್ಕೆ ಬಹಿಷ್ಕಾರ ಹಾಕಿದವು.

ವೆಬ್ದುನಿಯಾವನ್ನು ಓದಿ