ಶಾಲಾ ಪುಸ್ತಕಗಳಲ್ಲಿ ಧೀರುಭಾಯಿ ಅಂಬಾನಿಯ ಪಠ್ಯ ಅಳವಡಿಸಲು ಗುಜರಾತ್ ಸರಕಾರ ನಿರ್ಧಾರ

ಮಂಗಳವಾರ, 30 ಜೂನ್ 2015 (18:29 IST)
ವಿದ್ಯಾರ್ಥಿಗಳಲ್ಲಿ ಉದ್ಯಮದ ಕುರಿತಂತೆ ಹೆಚ್ಚಿನ ಆಸಕ್ತಿಯನ್ನು ಬೆಳೆಸಲು ಗುಜರಾತ್ ಸರಕಾರ ಪುಸ್ತಕಗಳಲ್ಲಿ ಖ್ಯಾತ ಉದ್ಯಮಿ ರಿಲಯನ್ಸ್ ಸಂಸ್ಥಾಪಕ ಧೀರುಭಾಯಿ ಅಂಬಾನಿ ಪಠ್ಯವನ್ನು ಪರಿಚಯಿಸಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.  
 
ರಾಜ್ಯ ಪಠ್ಯಪುಸ್ಕ ಮಂಡಳಿಯ ಸದಸ್ಯರ ಸಭೆಯಲ್ಲಿ ಭಾಗವಹಿಸಿದ್ದ ಶಿಕ್ಷಣ ಖಾತೆ ಸಚಿವ ಭೂಪೇಂದ್ರಸಿನ್ಹಾ ಚುಡಾಸ್ಮಾ, ವಿದ್ಯಾರ್ಥಿಗಳಿಗೆ ಧೀರುಭಾಯಿ ಅಂಬಾನಿಯಂತೆ ಖ್ಯಾತ ವ್ಯಕ್ತಿಗಳ ಜೀವನ ಮತ್ತು ಅವರ ಬದುಕಿನ ಹೋರಾಟದ ಬದುಕಿನ ಬಗ್ಗೆ ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದು ಹೇಳಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು. 
 
ಸಮಾಜಕ್ಕಾಗಿ ಜೀವನವನ್ನು ಮುಡುಪಾಗಿಟ್ಟ ಕಡಿಮೆ ಗುರುತನ್ನು ಹೊಂದಿರುವ ವ್ಯಕ್ತಿಗಳ ಜೀವನದ ಬಗ್ಗೆ ಕೂಡಾ ಪಠ್ಯದಲ್ಲಿ ಅಳವಡಿಸಲಾಗುವುದು ಎಂದು ತಿಳಿಸಿದ್ದಾರೆ. 
 
ಧೀರುಭಾಯಿ ಅಂಬಾನಿ ಹೊರತುಪಡಿಸಿ ದೇನಾ ಬ್ಯಾಂಕ್ ಸಂಸ್ಥಾಪಕರಾದ  ದೇವಕರಣ್ ನಾಂಜಿ ಸೇರಿದಂತೆ ಅನೇಕ ಖ್ಯಾತನಾಮರು ಸಮಾಜಕ್ಕೆ ಸೇವೆ ಸಲ್ಲಿಸಿದ್ದಾರೆ ಎಂದರು.
 
ಖ್ಯಾತನಾಮರ ಪಟ್ಟಿಯನ್ನು ಮಾಡಿ 6ನೇ ತರಗತಿಯಿಂದ 12ನೇ ತರಗತಿಯವರೆಗಿನ ಪಠ್ಯಗಳಲ್ಲಿ ಅವರ ಜೀವನದ ಯಶೋಗಾಥೆಯನ್ನು ವಿವರಿಸಲಾಗುವುದು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. 
 

ವೆಬ್ದುನಿಯಾವನ್ನು ಓದಿ