ಕಾಶ್ಮೀರ ಸಮಸ್ಯೆಗೆ ಬಂದೂಕೇ ಪರಿಹಾರವಲ್ಲ: ಓಮರ್ ಅಬ್ದುಲ್ಲಾ

ಗುರುವಾರ, 26 ಮಾರ್ಚ್ 2015 (15:48 IST)
ಕೇವಲ ಗನ್ ಬಳಸುವುದರಿಂದ ಕಾಶ್ಮೀರ ಸಮಸ್ಯೆ ಬಗೆಹರಿಯುವುದಿಲ್ಲ. ಇಂತಹ ಪ್ರಯತ್ನಗಳು ಈ ಹಿಂದೆಯೂ ನಡೆದಿವೆ. ಆದರೆ ಸಮಸ್ಯೆ ಬಗೆಹರಿಯಬೇಕಾದರೆ ಮಾತುಕತೆಯೇ  ಮೂಲ ಮಂತ್ರ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ತಿಳಿಸಿದ್ದಾರೆ. 
 
ಎನ್‌ಸಿಪಿ ಪಕ್ಷದ ನಾಯಕರಾಗಿರುವ ಅಬ್ದುಲ್ಲಾ, ವಿಧಾನಸಭಾಂಗಣದ ಹೊರಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಪ್ರಸ್ತುತದ ದಿನಗಳಲ್ಲಿ ಯಾರಾದರೂ ಓರ್ವರು ಮಾತುಕತೆಗೆ ಮುಂದಾಗಿದ್ದಾರೆ ಎಂದರೆ ಅದು ಹೊಸ ವಿಷಯವೇನಲ್ಲ. ನಾನು ಮತ್ತೊಮ್ಮೆ ಉದ್ಗರಿಸುತ್ತಿದ್ದೇನೆ. ಈ ನಮ್ಮ ಕಾಶ್ಮೀರ ಸಮಸ್ಯೆಗೆ ಕೇವಲ ಬಂದೂಕಿನಿಂದ ಪರಿಹಾರ ಸಾಧ್ಯವಿಲ್ಲ. ಇತಂಹ ಹಲವು ಪ್ರಯತ್ನಗಳು ಈ ಹಿಂದೆಯೂ ಜರುಗಿವೆ. ಆದರೆ ಅವೆಲ್ಲವೂ ಕೂಡ ವಿಫಲವಾಗಿವೆ ಎಂದು ಪ್ರತಿಕ್ರಿಯಿಸಿದರು.
 
ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ಪ್ರಸ್ತುತ ಅಧಿಕಾರದಲ್ಲಿರುವ ಪಿಡಿಪಿ ನಾಯಕರು ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಷೇರುದಾರರಾಗಿರುವ ಹುರಿಯತ್ ನಾಯಕರು ಪಾಕಿಸ್ತಾನದ ಜೊತೆ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದ್ದಾರೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಯಾವ ರೀತಿಯ ಮಾತುಕತೆಗಳನ್ನು ನಡೆಸಲು ಹೋಗುತ್ತಿದ್ದೀರಿ, ನಾನು ಕಳೆದ ಆರು ವರ್ಷಗಳಲ್ಲಿ ಆಂತರಿಕ ಭದ್ರತಾ ಸಭೆ, ಒಕ್ಕೂಟ ಸಭೆ, ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಆಗಸ್ಟ್ 15 ಹಾಗೂ ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಜ.26ರಂದು ಭಾಷಣಗಳನ್ನು ಮಾಡಿದ್ದೆ. ಆಧರೆ ಆ ಭಾಷಣಗಳಿಂದ ಹೊರ ಬನ್ನಿ. ಆ ಭಾಷಣದಲ್ಲಿನ ಮಾತುಗಳನ್ನೇ ನಾನು ಪುನರುಚ್ಚರಿಸುತ್ತಿದ್ದು, ಮಾತುಕತೆಯನ್ನು ಹೊರತು ಪಡಿಸಿದರೆ ಇತರೆ ಪರಿಹಾರವಿಲ್ಲ ಎಂದರು. 

ವೆಬ್ದುನಿಯಾವನ್ನು ಓದಿ