ಮಿಸ್ ಇಂಡಿಯಾ ರನ್ನರ್ ಅಪ್ ಆದ ಕರಾವಳಿ ಚೆಲುವೆ

ಸೋಮವಾರ, 30 ಮಾರ್ಚ್ 2015 (09:42 IST)
ಮಂಗಳೂರು ಮೂಲದ ಆಫ್ರೀನ್ ರಾಚೆಲ್ ವಾಜ್ 2015 ರ ಮಿಸ್ ಇಂಡಿಯಾ ಸ್ಪರ್ಧೆಯ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾಗಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಇವರು ಮಂಗಳೂರಿನ ಎಜೆ ಇನ್ಸ್​ಸ್ಟಿಟ್ಯೂಟ್ ಆಫ್ ಸೈನ್ಸಸ್​ನಲ್ಲಿ ವೈದ್ಯಕೀಯ ವಿದ್ಯಾರ್ಥಿಯಾಗಿದ್ದಾರೆ. ಭಾರತದ ವಿವಿಧ ರಾಜ್ಯಗಳಿಂದ ಬಂದ 21 ಮಂದಿ ಸುಂದರಿಯರು ಸ್ಪರ್ಧಾ  ಕಣದಲ್ಲಿದ್ದರು. 

ಮುಂಬೈನ ಯಶ್ ರಾಜ್ ಸ್ಟುಡಿಯೋದಲ್ಲಿ ಶನಿವಾರ ನಡೆದ ವೈಭವಯುತ ಸಮಾರಂಭದಲ್ಲಿ ಅಂತಿಮ ಸುತ್ತಿಗೆ ಬಂದಿದ್ದ ಐವರು ಸ್ಪರ್ಧಿಗಳ ಪೈಕಿ ಗುರ್​ಗಾಂವ್‌ನ ಅದಿತಿ ಆರ್ಯ 'ಮಿಸ್ ಇಂಡಿಯಾ' ಕಿರೀಟ ಧರಿಸಿದರು. ಇವರು 'ಮಿಸ್ ವರ್ಲ್ದ್' ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ರನ್ನರ್ ಅಪ್ ಆಗಿ ಆಯ್ಕೆಯಾದ ಅಫ್ರೀನ್ ರಾಚೆಲ್ 'ಮಿಸ್ ಇಂಟರ್ ನ್ಯಾಷನಲ್' ಹಾಗೂ ವೃತಿಕಾ ಸಿಂಗ್ 'ಮಿಸ್ ಗ್ರಾಂಡ್ ಇಂಟರ್ ನ್ಯಾಷನಲ್' ಸ್ಪರ್ಧೆಯಲ್ಲಿ ಭಾಗವಹಿಸುವ ಅರ್ಹತೆ ಗಿಟ್ಟಿಸಿದ್ದಾರೆ. 
 
ಖ್ಯಾತ ಬಾಲಿವುಡ್ ನಟರಾದ ಜಾನ್ ಅಬ್ರಹಾಂ, ಅನಿಲ್ ಕಪೂರ್, ಹಾಗೂ ನಿರ್ಮಾಪಕ ಫಿರೋಜ್ ಎ ನಾಡಿಯಾವಾಲಾ ತೀರ್ಪುಗಾರರ ಸ್ಥಾನವನ್ನಲಂಕರಿಸಿದ್ದರು. 

ವೆಬ್ದುನಿಯಾವನ್ನು ಓದಿ