ವಿದ್ಯುತ್ ಬಿಲ್ 75 ಕೋಟಿ ರೂಪಾಯಿ: ಆಘಾತಗೊಂಡ ಗ್ರಾಹಕ

ಶನಿವಾರ, 4 ಜುಲೈ 2015 (15:40 IST)
ಗುರ್ಗಾಂವ್ ಪ್ರದೇಶದ ನಿವಾಸಿಯೊಬ್ಬರಿಗೆ ವಿದ್ಯುತ್‌ ಇಲಾಖೆಯಿಂದ ಬರೋಬ್ಬರಿ 75 ಕೋಟಿ ರೂ ವಿದ್ಯುತ್ ಬಿಲ್ ಬಂದಿರುವುದು ಕಂಡು ಆಘಾತವಾಗಿದೆ.
 
ವಿದ್ಯುತ್ ಬಿಲ್ ಕಂಡು ಗಾಬರಿಯಾದ ಜಿತೇಂದರ್ ಕುಮಾರ್, ತನ್ನ ಮನೆ ಕೂಡಾ ಅಷ್ಟು ಬೆಲೆ ಬಾಳುವುದಿಲ್ಲ ಎಂದು ಹೇಳಿ ಶಾಕ್ ವ್ಯಕ್ತಪಡಿಸಿದ್ದಾರೆ. 
   
ವಿದ್ಯುತ್ ಇಲಾಖೆಗೆ ಹಲವಾರು ಬಾರಿ ತೆರಳಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಮನೆಗೆ ವಿದ್ಯುತ್ ಬಿಲ್ ನೀಡಿದ ಮೀಟರ್ ರೀಡರ್ ಕೂಡಾ ಸಮಸ್ಯೆಯನ್ನು ಪರಿಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯವರೆಗೆ ಸಮಸ್ಯೆ ಪರಿಹಾರವಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
 
ನನ್ನ ಮನೆಗೆ ಮಾಸಿಕವಾಗಿ 5 ಸಾವಿರ ರೂಪಾಯಿಗಳಿಂದ 9 ಸಾವಿರ ರೂಪಾಯಿಗಳವರೆಗೆ ವಿದ್ಯುತ್ ಬಿಲ್ ಬರುತ್ತಿತ್ತು. ಇದೀಗ 75 ಕೋಟಿ ರೂಪಾಯಿ ಬಿಲ್ ಬಂದಿದೆ ಎಂದು ಅಸಹಾಯಕತೆಯನ್ನು ಜಿತೇಂದರ್ ವ್ಯಕ್ತಪಡಿಸಿದ್ದಾರೆ.
 
ವಿದ್ಯುತ್ ಇಲಾಖೆ ನನಗೆ ಎರಡು ತಿಂಗಳ ಬಿಲ್ ಕಳುಹಿಸಿದ ಮೊತ್ತ 75,61,00,000 ರೂಪಾಯಿಗಳಾಗಿವೆ. ವಿದ್ಯುತ್ ಬಿಲ್ ನೋಡಿ ಆಘಾತಗೊಂಡಿದ್ದೇನೆ, ನನ್ನ ಮನೆ ಕೂಡಾ ಅಷ್ಟು ಬೆಲೆ ಬಾಳುವುದಿಲ್ಲ ಎಂದು ಜಿತೇಂದರ್ ಕುಮಾರ್ ಹೇಳಿದ್ದಾರೆ.   
 

ವೆಬ್ದುನಿಯಾವನ್ನು ಓದಿ