ಭಾರತ ನಮ್ಮ ನಂ 1 ಶತ್ರು ಎಂದ ಉಗ್ರ ಹಫೀಜ್ ಸಯೀದ್

ಸೋಮವಾರ, 20 ಏಪ್ರಿಲ್ 2015 (17:22 IST)
ತಾನೆಂದಿಗಿದ್ದರೂ ಭಾರತಕ್ಕೆ ಆಂತಕ ತರುವುದರಲ್ಲೇ ತತ್ಪರನಾಗಿರುತ್ತೇನೆ ಎಂಬುದನ್ನು ಸೂಚ್ಯವಾಗಿ ಹೇಳಿರುವ  ಭಾರತದ ಮೋಸ್ಟ್ ವಾಟೆಂಡ್ ಉಗ್ರ  ಹಫೀಜ್ ಸಯೀದ್ ಭಾರತ ನಮ್ಮ ನಂಬರ್ 1 ಶತ್ರು ದೇಶ ಎಂದಿದ್ದಾನೆ.

ಭಾನುವಾರ ಆತ ಪಾಕಿಸ್ತಾನದಲ್ಲಿ ಮೆರವಣಿಗೆಯೊಂದನ್ನು ಆಯೋಜಿಸಿದ್ದು, ಈ ಸಂದರ್ಭದಲ್ಲಿ ಪಾಕ್ ಪ್ರಧಾನಿ ನವಾಜ್ ಶರೀಫ್ ಪಕ್ಷದ ಸಂಸದರು ಮತ್ತು ಇಮ್ರಾನ್ ಖಾನ್‌ನ ಜಮಾತ್- ಇ- ಇಸ್ಲಾಮಿ ಪಕ್ಷದವರು ಸಹ ಹಾಜರಿದ್ದರು. ಯೆಮೆನ್‌ನ ಹೌತಿ ಬಂಡುಕೋರರ ವಿರುದ್ಧ ಸೌದಿ ಅರೇಬಿಯಾದ ಯುದ್ಧಕ್ಕೆ ಬೆಂಬಲ ವ್ಯಕ್ತಪಡಿಸಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಚೀನಾದ ಅಧ್ಯಕ್ಷ  ಕ್ಸಿ ಜಿನ್‌ಪಿಂಗ್ ಪಾಕಿಸ್ತಾನಕ್ಕೆ ಎರಡು ದಿನಗಳ ಭೇಟಿ ನೀಡಿ ಹಿಂತಿರುಗಿದ ಎರಡು ದಿನಗಳ ಬಳಿಕ ಉಗ್ರನಿಂದ ಈ ಮಾತುಗಳು ಕೇಳಿ ಬಂದಿವೆ. ಪಾಕ್ ಪ್ರವಾಸದ ಸಮಯದಲ್ಲಿ ಚೀನಾದ ಪ್ರಧಾನಿ ತಮಗೆ ಸಹೋದರನ ಮನೆಗೆ ಬಂದ ಅನುಭವವಾಗುತ್ತಿದೆ ಎಂದು ಹೇಳಿದ್ದರು. 
 
ಕಾಶ್ಮೀರಿ ಪ್ರತ್ಯೇಕತಾವಾದಿಗಳಿಗೆ ಸಮರ್ಥನೆ ವ್ಯಕ್ತಪಡಿಸಿದ ಸಯೀದ್, ಕಣಿವೆ ನಾಡಿನಲ್ಲಿ ಪಾಕ್ ಸೈನಿಕರಿಗೆ ತಮ್ಮ ಸಂಘಟನೆಯ ಜಿಹಾದಿಗಳು ಸಹಾಯ ಮಾಡುತ್ತಿದ್ದಾರೆಂಬುದನ್ನು ಒಪ್ಪಿಕೊಂಡರು. 
 
ಕಾಶ್ಮೀರಿ ಪ್ರತ್ಯೇಕತಾವಾದಿಗಳ ಹಕ್ಕನ್ನು ನೀಡಲು ಭಾರತ ಒಪ್ಪದಿದ್ದರೆ, ಅವರ ವಿರುದ್ಧ ಗುಂಡಿನ ಮಳೆಗರೆದರೆ ಅದಕ್ಕೆ ಜಿಹಾದ್ ಒಂದೇ ಪರಿಹಾರ. ಸ್ವಾತಂತ್ರ್ಯವನ್ನು ಪಡೆಯುವುದು ಕಾಶ್ಮೀರಿಗಳ ಹಕ್ಕು ಎಂಬುದನ್ನು ಪಾಕ್ ಸದಾ ಬೆಂಬಲಿಸಿದೆ. ಆದ್ದರಿಂದ ಪಾಕ್ ಸೈನಿಕರು  ಕಾಶ್ಮೀರಿಗಳ ಸಹಾಯಕ್ಕೆ ನಿಂತಾಗ ನಮ್ಮ ಸಂಘಟನೆ ಸಹ ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತದೆ ಎಂದು ಉಗ್ರ ಹೇಳಿದ್ದಾನೆ. 

ವೆಬ್ದುನಿಯಾವನ್ನು ಓದಿ