ಮೋದಿ ಪ್ರಭಾವದಿಂದ 5 ಸಾವಿರ ರೈತರ ಬಡತನ ನೀಗಿಸಿದ ಕೋಟ್ಯಾಧೀಶ ರೈತ

ಗುರುವಾರ, 22 ಮೇ 2014 (15:24 IST)
ಉತ್ತರಪ್ರದೇಶದ ದೌಲತ್‌ಪುರ್ ಗ್ರಾಮದಲ್ಲಿ ವಾಸವಾಗಿರುವ ರೈತನೊಬ್ಬ ನರೇಂದ್ರ ಮೋದಿಯವರಿಂದ ಪ್ರಭಾವಿತರಾಗಿ ನೆರೆಹೊರೆಯ ಸುಮಾರು 5 ಸಾವಿರ ರೈತರಿಗೆ ಕೃಷಿಯ ತಂತ್ರಜ್ಞಾನದ ಬಗ್ಗೆ ಮಾಹಿತಿ ನೀಡಿ ಬಡತನದ ಬವಣೆಯಿಂದ ಹೊರತಂದ ಯಶೋಗಾಥೆಯಾಗಿದೆ.     
 
8ನೇ ತರಗತಿ ಪಾಸಾಗಿದ್ದ ರೈತ ರಾಮಸರಣ್ ವರ್ಮಾ 1990ರಲ್ಲಿಯ ಕೃಷಿಯ ಬಗ್ಗೆ ಸಂಶೋಧನೆ ಆರಂಭಿಸಿದ್ದ. ತನ್ನ ಸಂಶೋಧನೆಗಾಗಿ 2007ರಲ್ಲಿ ಜಗಜೀವನ್ ರಾಮ್ ರಾಷ್ಟ್ರೀಯ ಪ್ರಶಸ್ತಿಗೆ ಕೂಡಾ ಭಾಜನರಾಗಿದ್ದರು. ರೈತನ ಸಾಧನೆಯನ್ನು ಭಾವಿ ಪ್ರದಾನಿ ನರೇಂದ್ರ ಮೋದಿ ಕೂಡಾ ಕೊಂಡಾಡಿದ್ದರು.  
 
ಮೋದಿ ಬಾಯಿಯಿಂದ ರೈತನ ಪ್ರಂಶಸೆಗಳನ್ನು ಬಂದಿರುವುದನ್ನು ಗಮನಿಸಿದ ದೇಶಾದ್ಯಂತವಿರುವ ರೈತರು ಆತನನ್ನು ಸಂಪರ್ಕಿಸಿ ಹೆಚ್ಚು ಬೆಳೆ ಉತ್ಪಾದಿಸುವ ಬಗ್ಗೆ ಮಾಹಿತಿ ನೀಡುವಂತೆ ಕೋರಿದ್ದರು. ರೈತ ಸರಣ್ ಅವರ ತಂತ್ರಜ್ಞಾನ ಬಳಸಿಕೊಂಡು 125 ಗ್ರಾಮಗಳ ರೈತರು ಉತ್ತಮ ಬೆಳೆ ಬೆಳೆದು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
 
ಕೆಲವೇ ತಿಂಗಳುಗಳಲ್ಲಿಯೇ ಸರಣ್ ತುಂಬಾ ಖ್ಯಾತಿ ಪಡೆದು ಸ್ಥಳೀಯರಿಗೆ, ರೈತಸಮೂಹಕ್ಕೆ ಗುರುವಾಗಿ ಪರಿಣಮಿಸಿದ. ಇಂದು ರೈತ ಸರಣ್ 70 ಏಕರೆ ಭೂಮಿಯ ಒಡೆಯನಾಗಿದ್ದು, ಕೋಟ್ಯಾಂತರ ರೂಪಾಯಿಗಳ ಮಾಲೀಕನಾಗಿದ್ದಾನೆ. ದೇಶದಲ್ಲಿ ಅತ್ಯುತ್ತಮ ಟೋಮ್ಯಾಟೋ ಬೆಳೆಯನ್ನು ಬೆಳೆದು ಅಚ್ಚರಿ ಮೂಡಿಸಿದ್ದಾನೆ.    
 
 
 
 
 

ವೆಬ್ದುನಿಯಾವನ್ನು ಓದಿ