ಮಾಯಾ ಕೊಡ್ನಾನಿ, ಬಾಬು ಬಜರಂಗಿಗೆ ಗಲ್ಲಿಗೇರಿಸಿ: ಅಸಾದುದ್ದೀನ್ ಓವೈಸಿ

ಶುಕ್ರವಾರ, 31 ಜುಲೈ 2015 (14:53 IST)
ಭಯೋತ್ಪಾದಕರಿಗೆ ಜೀವಾವಧಿ ಶಿಕ್ಷೆ ನೀಡಿ ರಕ್ಷಿಸುತ್ತಿರುವುದಲ್ಲದೇ ಮುಸ್ಲಿಂ ಸಮುದಾಯದ ವ್ಯಕ್ತಿಗಳಿಗೆ ಗಲ್ಲಿಗೇರಿಸುವ ಉದ್ದೇಶವೇನು ಎಂದು ಮಜ್ಲಿಸ್ ಎ ಇತ್ತೇಹಾದುಲ್(ಎಂಐಎಂ) ಪ್ರಶ್ನಿಸಿದೆ.
 
ಮುಂಬೈ ಸ್ಫೋಟದ ರೂವಾರಿ ಯಾಕೂಬ್ ಮೆಮೋನ್ ಗಲ್ಲಿಗೇರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಸಾದುದ್ದೀನ್, ಗುಜರಾತ್‌ನಲ್ಲಿ ನಡೆದ ನರೋಡಾ ಪಟಿಯಾ ಹತ್ಯೆಯ ಆರೋಪಿಗಳನ್ನು ರಾಜಕೀಯ ಬಲದಿಂದ ರಕ್ಷಿಸಲಾಗುತ್ತಿದೆ. ಇದೇ ರೀತಿ ಮುಂದುವರಿದಲ್ಲಿ ಮಾಯಾ ಕೊಡ್ನಾನಿ ಮತ್ತು ಬಾಬು ಬಜರಂಗಿಯನ್ನು ಮುಂಬರುವ ದಿನಗಳಲ್ಲಿ ಬಿಡುಗಡೆಗೊಳಿಸುವ ಸಾಧ್ಯತೆಗಳಿವೆ. ಆದರೆ, ನಾವು ಸರಕಾರದ ನೀತಿಗಳ ವಿರುದ್ಧ ನಿರಂತರವಾಗಿ ಹೋರಾಟ ಮಾಡುತ್ತಿವೆ ಎಂದು ಗುಡುಗಿದ್ದಾರೆ. 
 
ಕಳೆದ 2002ರಲ್ಲಿ ಗೋದ್ರಾ ದುರಂತದಲ್ಲಿ ಹಲವಾರು ಜನರ ಸಾವಿಗೆ ಕಾರಣರಾದ ಮಾಯಾ ಕೊಡ್ನಾನಿ ಮತ್ತು ಬಾಬು ಬಜರಂಗಿ ಗಲ್ಲಿಗೇರಿಸುವುದನ್ನು ನೋಡಲು ಬಯಸುತ್ತೇನೆ ಎಂದರು.
 
97 ಮುಸ್ಲಿಮರ ಹತ್ಯೆಗೆ ಕಾರಣವಾದ ನರೋಡಾ ಪ್ರಕರಣದಲ್ಲಿ ಬಾಬುಭಾಯಿ ಪಟೇಲ್‌ಗೆ ಜೀವಾವಧಿ ಶಿಕ್ಷೆಯಾಗಿದೆ. ಮಾಯಾ ಕೊಡ್ನಾನಿ ಕೂಡಾ ಗಲ್ಲಿನಿಂದ ಪಾರಾಗಲು ಪ್ರಯತ್ನಿಸುತ್ತಿದ್ದಾರೆ. ಒಂದು ವೇಳೆ ಯಾಕೂಬ್‌ ಗಲ್ಲಿಗೇರಲು ಅರ್ಹರಾಗಿದ್ದರೆ, ಮಾಯಾ ಕೊಡ್ನಾನಿ ಮತ್ತು ಬಾಬು ಬಜರಂಗಿ ಕೂಡಾ ಗಲ್ಲಿಗೇರಬೇಕು ಎಂದು ಅಸಾದುದ್ದೀನ್ ಓವೈಸಿ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
 

ವೆಬ್ದುನಿಯಾವನ್ನು ಓದಿ