ಹನುಮಾನ್ ಭಕ್ತ ಬರಾಕ್ ಒಬಾಮಾ

ಮಂಗಳವಾರ, 27 ಜನವರಿ 2015 (11:59 IST)
ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಹನುಮಂತನ ಭಕ್ತರು ಎಂಬುದು ಇಡೀ ಜಗತ್ತಿಗೆ ತಿಳಿದ ವಿಷಯ. ಆದರೆ ಬಹಳ ಜನರಿಗೆ ಗೊತ್ತಿಲ್ಲದ ಸತ್ಯವೊಂದಿದೆ. ಅದೇನೆಂದರೆ ಒಬಾಬಾ ತಮ್ಮ ಜೇಬಿನಲ್ಲಿ ಯಾವಾಗಲೂ ಆಂಜನೇಯನ ಪುಟ್ಟ ಮೂರ್ತಿಯನ್ನು ಇಟ್ಟುಕೊಂಡಿರುತ್ತಾರಂತೆ.  ಒಬಾಮಾ ಮಾಜಿ ಉಪಪ್ರಧಾನಿ ಲಾಲ್‌ಕೃಷ್ಣ  ಅಡ್ವಾಣಿಯವರ ಪುತ್ರಿ ಪ್ರತಿಭಾ ಅಡ್ವಾಣಿಯವರನ್ನು ಭೇಟಿಯಾದ ಸಂದರ್ಭದಲ್ಲಿ ಈ ವಿಶೇಷ ಸುದ್ದಿ ಬಹಿರಂಗಗೊಂಡಿದೆ. 
 
ರಾಷ್ಟ್ರಪತಿ  ಭವನದಲ್ಲಿ ಒಬಾಮಾರಿಗೆ ನೀಡಲಾಗಿದ್ದ ಔತಣಕೂಟದಲ್ಲಿ ಭಾಗವಹಿಸಿದ್ದ ಪ್ರತಿಭಾ ಅಡ್ವಾಣಿ, ನಮ್ಮಗಳ ನಡುವೆ ಒಂದು ವಿಷಯ ಸಾಮಾನ್ಯವಾಗಿದೆ ಎಂದು ಹೇಳಿದ್ದಾರೆ. ಆಗ ಒಬಾಮಾ ಅದು ಯಾವುದೆಂದು ಪ್ರಶ್ನಿಸಿದಾಗ ನಾವು ಕೂಡ ನಿಮ್ಮಂತೆ ಹನುಮಾನ್‌ನ ಭಕ್ತರು ಎಂದು ಪ್ರತಿಭಾ ಹೇಳಿಕೊಂಡಿದ್ದಾರೆ. 
 
ಆಗ ಒಬಾಬಾ ಹೌದು, ನಾನು ಹನುಮಾನ್ ದೇವರ ಮೂರ್ತಿಯನ್ನು ಸದಾ ನನ್ನ ಬಳಿ ಇಟ್ಟುಕೊಂಡಿರುತ್ತೇನೆ ಎಂದು ಹೇಳಿದರು ಮತ್ತು ತಮ್ಮ ಜೇಬಿನಿಂದ ಬೆಳ್ಳಿಯ ಹನುಮಾನ್ ಮೂರ್ತಿಯನ್ನು ತೆಗೆದು ತೋರಿಸಿದರು ಎಂದು ತಿಳಿದು ಬಂದಿದೆ. 

ವೆಬ್ದುನಿಯಾವನ್ನು ಓದಿ