ಪ್ರತಿಭಟನೆ ಹಿಂಪಡೆದಲ್ಲಿ ಬಿಜೆಪಿ 1200 ಕೋಟಿ ರೂ, ಆಮಿಷವೊಡ್ಡಿತ್ತು: ಹಾರ್ದಿಕ್ ಪಟೇಲ್

ಶನಿವಾರ, 13 ಫೆಬ್ರವರಿ 2016 (17:57 IST)
ಪಟಿದಾರ್ ಅನಾಮತ್ ಅಂದೋಲನ್ ಸಮಿತಿ ಪ್ರತಿಭಟನೆಯನ್ನು ಹಿಂಪಡೆದಲ್ಲಿ 1200 ಕೋಟಿ ರೂ. ಮತ್ತು ಬಿಜೆಪಿ ಯುವ ವಿಭಾಗದಲ್ಲಿ ಮಹತ್ವದ ಹುದ್ದೆ ನೀಡುವುದಾಗಿ ಬಿಜೆಪಿ ಹಿರಿಯ ನಾಯಕರು ಆಮಿಷವೊಡ್ಡಿದ್ದರು ಎಂದು ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ಆರೋಪಿಸಿದ್ದಾರೆ.
 
ಕಳೆದ ಮೂರು ಅಥವಾ ನಾಲ್ಕು ದಿನಗಳಿಂದ ಗುಜರಾತ್ ಸರಕಾರದ ಪರವಾಗಿರುವ ಇಬ್ಬರು ವ್ಯಕ್ತಿಗಳು ಜೈಲಿನಲ್ಲಿ ನನ್ನನ್ನು ಭೇಟಿಯಾಗುತ್ತಿದ್ದಾರೆ ಎಂದು ಸೂರತ್‌ನ ಲಾಜ್‌ಪೋರೆ ಜೈಲಿನಲ್ಲಿರುವ ಹಾರ್ದಿಕ್ ಪಟೇಲ್, ತಮ್ಮ ತಂದೆಗೆ ಬರೆದ ಪತ್ರದ ಜೆರಾಕ್ಸ್ ಪ್ರತಿಗಳನ್ನು ಸುದ್ದಿಗಾರರಿಗೆ ಬಿಡುಗಡೆ ಮಾಡಲಾಗಿದೆ.
 
ಕಳೆದ ಎಂಟು ತಿಂಗಳುಗಳಿಂದ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಪಟಿದಾರ್ ಹೋರಾಟ ಸಮಿತಿ ನಡೆಸುತ್ತಿದ್ದ ಸಂದರ್ಭದಲ್ಲಿ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ಪೊಲೀಸ್ ದೌರ್ಜನ್ಯಕ್ಕೆ ಕಾರಣರಾಗಿದ್ದರು ಎನ್ನಲಾಗಿದೆ.
 
ಪ್ರತಿಭಟನೆ ಮುಂದುವರಿಯಲಿದೆ.ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ನೀವು ನನ್ನ ಬಗ್ಗೆ ಚಿಂತೆ ಮಾಡುವುದು ಬೇಡ ಎಂದು ಹಾರ್ದಿಕ್ ಪಟೇಲ್ ತಮ್ಮ ತಂದೆಗೆ ಪತ್ರ ಬರೆದಿದ್ದಾರೆ.
 
23 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್, ಮುಖ್ಯಮಂತ್ರಿ ಆನಂದಿ ಬೆನ್ ಪಟೇಲ್ ಅವರಿಗೆ ಪತ್ರ ಬರೆದು ಯಾವುದೇ ಕಾರಣಕ್ಕೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ