ಹಾರ್ದಿಕ್ ಪಟೇಲ್ ಗುಜರಾತ್ ಹೀರೋ

ಶನಿವಾರ, 29 ಆಗಸ್ಟ್ 2015 (16:17 IST)
ಗುಜರಾತ್‌ನಲ್ಲಿ ಹಾರ್ದಿಕ್ ಪಟೇಲ್‌ಗೆ ಸಿಗುತ್ತಿರುವ ಅಪಾರ ಜನಬೆಂಬಲ "ಬಿಜೆಪಿಗೆ ಶುಭ ಸಂಕೇತವಲ್ಲ", ಎಂದಿರುವ ಅದರದೇ ಮಿತ್ರ ಪಕ್ಷ ಶಿವಸೇನೆ ಗುಜರಾತ್ ಶಾಂತಿಯುತ ರಾಜ್ಯ ಎಂದು ವಾದಿಸುತ್ತಿರುವವರ ಬಾಯಿ ಮುಚ್ಚಿಸಿರುವ ಹಾರ್ದಿಕ್ 'ಗುಜರಾತ್ ಹೀರೋ' ಎಂದು ಬಣ್ಣಿಸಿದೆ. 

 
'ಇಲ್ಲಿಯವರೆಗೆ ಮೋದಿ ಮಾತ್ರ ಜನಸಾಗರವನ್ನು ಸೆಳೆಯುವ ಏಕೈಕ ರಾಜಕೀಯ ನೇತಾರ ಎಂದು ಹೇಳಲಾಗುತ್ತಿತ್ತು. ಆದರೆ ಅದೀಗ ಸುಳ್ಳಾಗಿದ್ದು ಅವರನ್ನು ಮೀರಿಸಿ ಹಾರ್ದಿಕ್ ಜನಸಾಗರದ ರಾಜನಾಗಿದ್ದಾರೆ. ಇದು ಬಿಜೆಪಿ ಪಾಲಿಗೆ ಶುಭ ಸಂಕೇತವಲ್ಲ', ಎಂದು ಸೇನೆಯ ಮುಖವಾಣಿ ಸಾಮ್ನಾದಲ್ಲಿ ಬರೆಯಲಾಗಿದೆ. 
 
,ಹಾರ್ದಿಕ್ ಪಟೇಲ್, ಗುಜರಾತ್ ಹೀರೋ. ಅವರ ಸಭೆಗಳು ನಾಲ್ಕು ಲಕ್ಷ ಜನರನ್ನು ಒಟ್ಟುಗೂಡಿಸಿವೆ. ಕಳೆದ ಮಂಗವಾರ ಅಹಮದಾಬಾದ್‌ನಲ್ಲಿ ನಡೆದ ವಿಶಾಲ ಸಭೆಯಲ್ಲಿ ಅವರು ರಾಜ್ಯ ಸರ್ಕಾರಕ್ಕೆ ಸವಾಲು ಹಾಕಿದರು. ಇಲ್ಲಿಯವರೆಗೆ ಮೋದಿಯವರು ಸರ್ದಾರ ವಲ್ಲಭಾಯಿ ಪಟೇಲ್ ಹೆಸರನ್ನು ಬಳಸುತ್ತಿದ್ದರು. ಆದರೆ ಈಗ ಅದನ್ನು ಹಾರ್ದಿಕ್ ತಮ್ಮದಾಗಿಸಿಕೊಂಡಿದ್ದಾರೆ', ಎಂದು ಸೇನೆ ವ್ಯಂಗ್ಯವಾಡಿದೆ. 
 
'ಆದರೆ ಸರ್ಕಾರ ಅವರನ್ನು ಬಂಧಿಸುವ ಸಾಹಸಕ್ಕೆ ಕೈ ಹಾಕಿತು ಮತ್ತು ಆ ತಪ್ಪಿಗಾಗಿ ತಕ್ಕ ಬೆಲೆ ತೆತ್ತಿತು. ರಾಜ್ಯದಲ್ಲೆಡೆ ಹಿಂಸೆ ತಾಂಡವವಾಡಿತು. ಸಚಿವರೂ ಸಹ ಪಟೇಲ್ ಸಮುದಾಯದ ಕೋಪದ ಪರಿಣಾಮವನ್ನು ಅನುಭವಿಸುವಂತಾಯಿತುಟ, ಎಂದು ಸೇನೆ ಹೇಳಿದೆ.

ವೆಬ್ದುನಿಯಾವನ್ನು ಓದಿ