ಸೋನಿಯಾ ಗಾಂಧಿ ಅಳಿಯನಿಗೆ ಜೈಲು?

ಸೋಮವಾರ, 22 ಡಿಸೆಂಬರ್ 2014 (09:21 IST)
ಕಾಂಗ್ರೆಸ್​ ಅಧ್ಯಕ್ಷೆ ಸೋನಿಯಾ ಗಾಂಧಿ ಅಳಿಯ ರಾಬರ್ಟ್​ ವಾದ್ರಾಗೆ 2 ವರ್ಷ ಜೈಲು ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.  ವಾದ್ರಾರ ಭೂಮಿಯ ದಾಖಲೆಗಳು ಸೋರಿಕೆಯಾಗಿದ್ದು, ಅವರು ಕಾನೂನಿನ ಮಿತಿಗಿಂತ ಹೆಚ್ಚು ಜಮೀನು ಹೊಂದಿರುವುದು ಬಯಲಾಗಿದೆ. ಹರಿಯಾಣಾದಲ್ಲಿ ವಾದ್ರಾ ಮತ್ತು ಅವರ ಕಂಪನಿಗಳು ಹಾಗೂ ಪತ್ನಿ ಪ್ರಿಯಾಂಕಾ ಗಾಂಧಿ ಹೆಸರಲ್ಲಿ ಬರೋಬ್ಬರಿ 146,755 ಎಕರೆ ಭೂಮಿಯಿದೆ.

 
ಗುರ್​‌ಗಾಂವ್​, ಫರಿದಾಬಾದ್​ ಮೆವತ್​ ಹಾಗೂ ಫಲ್​ವಲ್​ ಜಿಲ್ಲೆಗಳಲ್ಲಿ ರಾಬರ್ಟ್​ ವಾದ್ರಾ, ಪ್ರಿಯಾಂಕಾ ಗಾಂಧಿ ವಾದ್ರಾ ಹಾಗೂ ಅವರ ಕಂಪನಿ ಹೆಸರಲ್ಲಿ ಸುಮಾರು 146.75 ಎಕರೆ ಭೂಮಿಯ ದಾಖಲೆಗಳು ಪತ್ತೆಯಾಗಿದ್ದವು.  ಕಾನೂನಿನ ಪ್ರಕಾರ ಒಬ್ಬ ವ್ಯಕ್ತಿ ಅಥವಾ ಆತನ ಕುಟುಂಬ 53.8 ಎಕರೆ ಭೂಮಿ ಹೊಂದಲಷ್ಟೇ ಅವಕಾಶವಿದೆ. ಆದರೆ ವಾದ್ರಾ ಹೊಂದಿರುವ ಆಸ್ತಿ ಕಾನೂನಿನ ಮಿತಿಗಿಂತ ಜಾಸ್ತಿ ಇದೆ. ಈ ಆರೋಪ ಸಾಬೀತಾದಲ್ಲಿ ವಾದ್ರಾಗೆ 2 ವರ್ಷ ಜೈಲು ಶಿಕ್ಷೆಯಾಗಲಿದೆ ಎಂದು ವರದಿಯಾದಿದೆ. 
 
2010 ಮತ್ತು 2012ರ ಅವಧಿಯಲ್ಲಿ ವಾದ್ರಾ 82.2 ಎಕರೆ ಜಮೀನನ್ನು ಮಾರಾಟ ಮಾಡಿದ್ದಾರೆ. ಆದರೆ ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಲ್ಲಿಸಲಾದ ಅಫಿಡವಿಟ್‌ನಲ್ಲಿ ಈ ವಿಚಾರ ಮುಚ್ಚಿಟ್ಟದ್ದಾರೆ ಎಂದು ವರದಿಯಾಗಿದೆ. 

ವೆಬ್ದುನಿಯಾವನ್ನು ಓದಿ