ಬರೊಬ್ಬರಿ 132 ಕೋಟಿ ವಿದ್ಯುತ್ ಬಿಲ್ ಪಡೆದು ಕಂಗಾಲಾದ ಪಾನವಾಲಾ

ಶುಕ್ರವಾರ, 24 ಅಕ್ಟೋಬರ್ 2014 (15:51 IST)
ಹರಿಯಾಣಾದ ಪಾನ್‌ವಾಲಾ( ಅಡಿಕೆ- ವೀಳ್ಯದೆಲೆ ಮಾರಾಟಗಾರ) ನೊಬ್ಬ  132 ಕೋಟಿ ರೂಪಾಯಿ ವಿದ್ಯುತ್ ಬಿಲ್ ಪಡೆದು ಕಂಗಾಲಾಗಿದ್ದಾನೆ.

ಸೋನಿಪತ್ ಜಿಲ್ಲೆಯಲ್ಲಿರುವ ಗೋಹಾನಾ ನಗರದಲ್ಲಿ ಪಾನ್-ಬೀಡಾ ಅಗಡಿಯನ್ನು ನಡೆಸುವ ಮಾಲೀಕ ರಾಜೇಶ್‌ ಅವರಿಗೆ ಅಕ್ಟೋಬರ್ ತಿಂಗಳ ವಿದ್ಯುತ್ ಬಿಲ್‌ ನೋಡಿ ಶಾಕ್ ಹೊಡೆದಂತಾಗಿದೆ. ಆತನಿಗೆ ಬಂದ ಬಿಲ್ ಪ್ರಕಾರ ಆತನ ಕರೆಂಟ್ ಬಿಲ್ 133 ಕೋಟಿ, 29 ರೂಪಾಯಿ.
 
ಈ ಬಿಲ್ ನೋಡಿ ನನಗೆ ಶಾಕ್ ಆಯಿತು. ಇದು  ಸಂಖ್ಯೆಯಲ್ಲಾದ ತಪ್ಪಲ್ಲ. ಅಕ್ಷರಗಳಲ್ಲು ಕೂಡ ಅದೇ ಮೊತ್ತವನ್ನು ಬರೆಯಲಾಗಿದೆ ಎನ್ನುತ್ತಾನೆ ರಾಜೇಶ್.
 
 ನಾನು ಪುಟ್ಟ ಅಂಗಡಿಯನ್ನು ನಡೆಸುವ ಸಾಮಾನ್ಯ ವ್ಯಕ್ತಿ. ನಾನು ಬಳಸುವುದು ಒಂದು ಬಲ್ಬ್ ಮತ್ತು ಒಂದು ಫ್ಯಾನ್. ಸಾಮಾನ್ಯವಾಗಿ ನನಗೆ ಬರುವ ವಿದ್ಯುತ್ ಬಿಲ್ 1,000 ಕ್ಕಿಂತ ಕಡಿಮೆ. ಈ ಬಿಲ್ ನಿಜವಾಗಿಯೂ ನಾನು ಕಂಗಾಲಾಗುವಂತೆ ಮಾಡಿದೆ. ಶುಕ್ರವಾರ ವಿದ್ಯುತ್ ಇಲಾಖೆ ಕಚೇರಿಗೆ ಹೋಗಿ ಈ ಕುರಿತು ಪರಿಶೀಲಿಸುತ್ತೇನೆ ಎನ್ನುವಾಗ ರಾಜೇಶ್ ಮಾತಿನಲ್ಲಿ ಆತಂಕವೇ  ಮನೆ ಮಾಡಿತ್ತು.
 
ಉತ್ತರ ಹರಿಯಾಣ ಬಿಜ್ಲಿ ವಿತರಣ್ ನಿಗಮ್ ಈ ಬಿಲ್‌ನ್ನು ನೀಡಿದೆ.  
 
ಹರಿಯಾಣಾ ವಿದ್ಯುತ್ ಇಲಾಖೆ ಈ ಮೊದಲು ಸಹ ಇಂತಹ ಮೂರ್ಖ ಕೆಲಸಗಳನ್ನು ಮಾಡಿದ ಉದಾಹರಣೆಗಳಿವೆ ಎನ್ನಲಾಗಿದೆ. 

ವೆಬ್ದುನಿಯಾವನ್ನು ಓದಿ