ಹರ್ಯಾಣಾ: ಜಾಟ್ ಹಿಂಸಾಚಾರಕ್ಕೆ 10 ಬಲಿ

ಭಾನುವಾರ, 21 ಫೆಬ್ರವರಿ 2016 (16:18 IST)
ಮೀಸಲಾತಿಗಾಗಿ ಹರ್ಯಾಣಾ ಜಾಟ್ ಸಮುದಾಯ ನಡೆಸುತ್ತಿರುವ ಹೋರಾಟ ಮುಂದುವರೆದಿದ್ದು ಇಂದು ಸಹ ಸಂಘರ್ಷ ಮುಂದುವರೆದಿದೆ. ಗಲಭೆಯಲ್ಲಿ ಇಂದು 6 ಜನರು ಮೃತಪಟ್ಟಿದ್ದಾರೆ. ಈ ಮೂಲಕ  ಹಿಂಸಾಚಾರದಲ್ಲಿ ಮೃತ ಪಟ್ಟವರ ಸಂಖ್ಯೆ 10ಕ್ಕೇರಿದೆ. 
 
ಪ್ರತಿಭಟನೆ 7 ದಿನಕ್ಕೆ ಕಾಲಿಟ್ಟಿದ್ದು ಗಲಭೆಯಲ್ಲಿ 150ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. 
 
ಗಲಭೆಕೋರರು ರಸ್ತೆಗಳನ್ನು ಅಗೆದು ಹಾಕುತ್ತಿದ್ದಾರೆ. ಅಂಗಡಿಗಳನ್ನು ದೋಚುತ್ತಿದ್ದು ಪ್ರತಿಭಟನಾಕಾರರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.
 
ರಾಜ್ಯದ ಹಲವೆಡೆಗಳಲ್ಲಿ ಕರ್ಫ್ಯೂವನ್ನು ಮುಂದುವರೆಸಲಾಗಿದೆ. ದೆಹಲಿಗೆ ನೀರು ಹರಿಯಾಣದಿಂದಲೇ ಪೂರೈಕೆಯಾಗುವುದರಿಂದ  ಪ್ರತಿಭಟನೆಯಿಂದಾಗಿ ದೆಹಲಿಯಲ್ಲಿ ತೀವ್ರ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ಸಿಎಂ ಕೇಜ್ರಿವಾಲ್ ದೆಹಲಿಯ ಶಾಲಾ-ಕಾಲೇಜುಗಳಿಗೆ ನಾಳೆ ರಜೆ ಘೋಷಿಸಿದ್ದಾರೆ.
 
ಪರಿಸ್ಥಿತಿಯನ್ನು ಹತೋಟಿಗೆ ತರಲಾಗದೆ ರಾಜ್ಯ ಗೃಹ ಇಲಾಖೆ ಕೇಂದ್ರ ಸರ್ಕಾರದ ನೆರವನ್ನು ಕೋರಿದೆ. ರಾಜ್ಯ ಪೊಲೀಸ್ ಪಡೆಯಲ್ಲದೆ ಕೇಂದ್ರ ಸೇನಾಪಡೆಯನ್ನು ಕೂಡ ನಿಯೋಜಿಸಲಾಗಿದೆ.
 
ಗಲಭೆ ಸೃಷ್ಟಿ ಮಾಡುತ್ತಿರುವವರ ಜತೆ ಮಾತುಕತೆ ಇಲ್ಲ ಎಂದು ಸಿಎಂ ಮನೋಹರ್ ಲಾಲ್ ಕಟ್ಟರ್ ಖಡಕ್ ಆಗಿ ಹೇಳಿದ್ದಾರೆ. 

ಪರಿಸ್ಥಿತಿಯನ್ನು ನಿಯಂತ್ರಿಸಲು ಸೇನೆಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ ಎಂದು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ತಿಳಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ