ದೆಹಲಿ ಮುನ್ಸಿಪಲ್ ಕಾರ್ಪೋರೇಶನ್ ಉದ್ಯೋಗಿಗಳ ವಿರುದ್ಧ ಹೈಕೋರ್ಟ್ ಕಿಡಿ

ಶುಕ್ರವಾರ, 5 ಫೆಬ್ರವರಿ 2016 (16:09 IST)
ದೆಹಲಿಯ ಮುನ್ಸಿಪಲ್ ಕಾರ್ಪೋರೇಶನ್ ಉದ್ಯೋಗಿಗಳು ನಡೆಸುತ್ತಿರುವ ಮುಷ್ಕರದಿಂದ ಜನಸಾಮಾನ್ಯರು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಕೂಡಲೇ ಮುಷ್ಕರವನ್ನು ಹಿಂಪಡೆದು ನಗರವನ್ನು ಕಸದಿಂದ ಮುಕ್ತಗೊಳಿಸಿ ಎಂದು ದೆಹಲಿ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 
 
ಬಿಜೆಪಿ ಅಧಿಕಾರದಲ್ಲಿರುವ ಎಂಸಿಡಿ ಮತ್ತು ಆಪ್ ನೇತೃತ್ವದ ದೆಹಲಿ ಸರಕಾರದ ಮಧ್ಯೆ ನಡೆಯುತ್ತಿರುವ ತಿಕ್ಕಾಟದಿಂದ ಜನತೆ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಗರವನ್ನು ಸ್ವಚ್ಚವಾಗಿಡುವುದು  ಎಂಸಿಡಿಯ ಪ್ರಮುಖ ಆದ್ಯತೆಯಾಗಿದ್ದರಿಂದ ನಿರ್ಲಕ್ಷ್ಯ ಧೋರಣೆಯನ್ನು ಸಹಿಸಲಾಗದು ಎಂದು ಕೋರ್ಟ್ ಕಿಡಿಕಾರಿದೆ. 
 
ಮತ್ತೊಂದೆಡೆ, ಜನೆವರಿವರೆಗೆ ಉದ್ಯೋಗಿಗಳ ವೇತನ ನೀಡಲಾಗಿದೆ. ಕೂಡಲೇ ಕರ್ತವ್ಯಕ್ಕೆ ಹಾಜರಾಗುವಂತೆ ಕೂಡಾ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಎಂಸಿಡಿ ಪರ ವಕೀಲರು ಕೋರ್ಟ್‌ಗೆ ಮಾಹಿತಿ ನೀಡಿದರು.
 
ದೆಹಲಿ ಹೈಕೋರ್ಟ್ ಇಂದು ಮಧ್ಯಾಹ್ನದವರೆಗೆ  ಎಂಸಿಡಿಗೆ ಸಮಯ ನೀಡಿದ್ದು,ಮುಷ್ಕರ ನಿರತರೊಂದಿಗೆ ಮಾತನಾಡಿ, ಪ್ರತಿಭಟನೆ ಅಂತ್ಯವಾಗಿದೆಯೋ ಇಲ್ಲವೋ ಎನ್ನುವ ಬಗ್ಗೆ ಕೋರ್ಟ್‌ಗೆ ಮಾಹಿತಿ ನೀಡಿ ಎಂದು ಗುಡುಗಿದೆ.

ವೆಬ್ದುನಿಯಾವನ್ನು ಓದಿ