ಮುಂಬೈ ಉಗ್ರರ ದಾಳಿಯಲ್ಲಿ ಪಾಕ್ ಸೇನೆ, ಐಎಸ್‌ಐ ಕೈವಾಡ: ಹೆಡ್ಲಿಯಿಂದ ಸ್ಫೋಟಕ ಮಾಹಿತಿ

ಭಾನುವಾರ, 7 ಫೆಬ್ರವರಿ 2016 (17:13 IST)
ಮುಂಬೈನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಪಾಕಿಸ್ತಾನದ ಸೇನೆ ಮತ್ತು ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಕೈವಾಡವಿತ್ತು ಎಂದು ಅಮೆರಿಕದಲ್ಲಿ ಬಂಧಿತನಾಗಿರುವ ಡೇವಿಡ್ ಕೊಲೆಮನ್ ಹೆಡ್ಲಿ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾನೆ.
 
ಲಷ್ಕರ್-ಎ-ತೊಯಿಬಾ ಮುಖ್ಯಸ್ಥ ಹಫೀಜ್ ಸಯೀದ್ ಅನುಮತಿಯಿಂದ ಮುಂಬೈನಲ್ಲಿ ಉಗ್ರರು ದಾಳಿ ನಡೆಸಿದ್ದರು. ದಾಳಿಗಾಗಿ ಐಎಸ್‌ಐ ಹಣಕಾಸಿನ ನೆರವು ನೀಡಿತ್ತು. ಮುಂಬೈ ಹೊರತುಪಡಿಸಿ, ಉಪರಾಷ್ಟ್ರಪತಿ ನಿವಾಸ ಮತ್ತು ಇಂಡಿಯಾ ಗೇಟ್ ಹಾಗೂ ಸಿಬಿಐ ಕಚೇರಿಗಳ ವಿವರಗಳನ್ನು ನಾನು ಪಾಕಿಸ್ತಾನಕ್ಕೆ ನೀಡಿದ್ದೇನೆ ಎಂದು ಹೆಡ್ಲಿ ತಪ್ಪೊಪ್ಪಿಕೊಂಡಿದ್ದಾನೆ. 
 
ಐಎಸ್‌ಐ ಸಂಸ್ಥೆಯ ಮೇಜರ್‌ ಇಕ್ಬಾಲ್ ಮತ್ತು ಸಮೀರ್ ಅಲಿ ಮುಂಬೈನಲ್ಲಿ ಉಗ್ರರ ದಾಳಿಯ ಮಾಹಿತಿ ನೀಡಿದ್ದರು. ಐಎಸ್‌ಐ ಬ್ರಿಗೇಡಿಯರ್ ರಿವಾಜ್ ಮತ್ತು ಐಎಸ್‌ಐ ಮುಖ್ಯಸ್ಥ ಶುಜಾ ಪಾಶಾ ಕೂಡಾ ಝಕೀರ್ ರೆಹ್ಮಾನ್ ಲಖ್ವಿಯನ್ನು ಭೇಟಿ ಮಾಡಿದ್ದರು ಎಂದು ತಿಳಿಸಿದ್ದಾನೆ.
 
ಮುಂಬೈ ಉಗ್ರರ ದಾಳಿ ಕುರಿತಂತೆ ಡೇವಿಡ್ ಹೆಡ್ಲಿ, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮುಂದೆ ಸಂಪೂರ್ಣ ಮಾಹಿತಿ ನೀಡಿದ್ದಾನೆ ಎಂದು ಮೂಲಗಳು ತಿಳಿಸಿವೆ. 
 

ವೆಬ್ದುನಿಯಾವನ್ನು ಓದಿ