ಇಶ್ರತ್‌ ಜಹಾನ್‌ ಆತ್ಮಹತ್ಯಾ ಬಾಂಬರ್: ಸ್ಪೋಟಕ ಮಾಹಿತಿ ಬಾಯ್ಬಿಟ್ಟ ಹೆಡ್ಲಿ

ಗುರುವಾರ, 11 ಫೆಬ್ರವರಿ 2016 (12:15 IST)
166 ಮಂದಿಯ ಬಲಿ ಪಡೆದ 26/11 ಮುಂಬೈ ದಾಳಿ ಪ್ರಕರಣದ ಪ್ರಮುಖ ಆರೋಪಿ ಪಾಕ್ ಮೂಲದ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿಯ ಒಂದು ಹೊಸ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾನೆ. ಗುಜರಾತ್ ನಲ್ಲಿ ಎನ್ ಕೌಂಟರ್ ಆಗಿದ್ದ ಇಶ್ರತ್ ಜಹಾನ್ ಲಷ್ಕರ್‌ ಉಗ್ರ ಸಂಘಟನೆಯ ಮಾನವ ಬಾಂಬರ್ ಆಗಿದ್ದಳು ಎಂದು ಡೇವಿಡ್ ಹೆಡ್ಲಿ ಬಾಯ್ಬಿಟ್ಟಿದ್ದಾನೆ. ಹೀಗಾಗಿ  ಇಶ್ರತ್‌ ಜಹಾನ್‌ ಎನ್‌ಕೌಂಟರ್‌ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದ್ದಂತಾಗಿದೆ.
ಮುಂಬೈ ಮೂಲದ ಯುವತಿ ಇಶ್ರಾತ್ ಜಹಾನ್(19), ಸೇರಿ ನಾಲ್ವರನ್ನು  ಅಹಮದಾಬಾದ್‌ನಲ್ಲಿ  ಜೂನ್ 15, 2004ರಲ್ಲಿ ಅಹಮದಾಬಾದ್ ನಗರ ಅಪರಾಧ ದಳ ಎನ್‌ಕೌಂಟರ್ ನಡೆಸಿ ಹತ್ಯೆ ಮಾಡಿತ್ತು. ಆಗ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿಯವರ ಹತ್ಯೆಗೆ ಸಂಚು ರೂಪಿಸಿದ್ದರು ಎಂಬ ಹಿನ್ನೆಲೆಯಲ್ಲಿ ಎನ್‌ಕೌಂಟರ್ ನಡೆಸಿದ್ದೇವೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದರು. 
 
ಈ ಎನ್ ಕೌಂಟರ್ ಪ್ರಕರಣ ದೇಶದಲ್ಲಿ ಭಾರಿ ವಿವಾದ ಸೃಷ್ಟಿಸಿತ್ತು ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕ ಅಮಿತ್ ಶಾಗೆ ಕ್ಲೀನ್ ಚಿಟ್ ಪಡೆದು ಹೊರಬಂದಿದ್ದರು.
 
ಕಾಂಗ್ರೆಸ್ ಸಹ ಇದು ನಕಲಿ ಎನ್‌ಕೌಂಟರ್ ಎಂದು ಹೇಳಿತ್ತು.

ವೆಬ್ದುನಿಯಾವನ್ನು ಓದಿ