ಪುತ್ರಿ ಸ್ವಾತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಯಾರು ಕಾಪಾಡಲಿಲ್ಲ: ಸ್ವಾತಿ ತಂದೆ

ಮಂಗಳವಾರ, 28 ಜೂನ್ 2016 (18:28 IST)
ನಗರದ ರೈಲ್ವೆ ನಿಲ್ದಾಣದಲ್ಲಿ ಪುತ್ರಿ ಹತ್ಯೆಯಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಯಾರೂ ಅವಳನ್ನು ಕಾಪಾಡುವ ಪ್ರಯತ್ನ ಮಾಡಲಿಲ್ಲ ಎಂದು ಹತ್ಯೆಯಾದ ಇನ್ಫೋಸಿಸ್ ಮಹಿಳಾ ಉದ್ಯೋಗಿ ಸ್ವಾತಿ ತಂದೆ ತಮ್ಮ ನೋವು ವ್ಯಕ್ತಪಡಿಸಿದ್ದಾರೆ.
 
ಹತ್ಯೆಯಾಗುತ್ತಿರುವಾಗ ಪ್ರಯಾಣಿಕರು ಮೂಕ ಪ್ರೇಕ್ಷಕರಂತೆ ನಿಂತಿದ್ದವರಿಂದ ನಮ್ಮ ಮಗಳನ್ನು ಜೀವಂತವಾಗಿ ನೋಡಲು ಸಾಧ್ಯವಾಗಲಿಲ್ಲ ಎಂದು ಸ್ವಾತಿ ತಂದೆ ಸಂತಾನಾ ಗೋಪಾಲಾ ಕೃಷ್ಣನ್ ಹೇಳಿದ್ದಾರೆ.  
 
ಯುವತಿಯ ಹತ್ಯೆಯಾಗುತ್ತಿರುವುದು ಕಂಡ ಪ್ರಯಾಣಿಕರು ರೈಲು ನಿಲ್ದಾಣದಿಂದ ಹೊರಗಡೆ ಓಡಿ ಹೋಗಿದ್ದಲ್ಲದೇ ಕೆಲ ನಿಮಿಷಗಳ ನಂತರ ಬಂದ ಮತ್ತೊಂದು ರೈಲು ಹತ್ತಿ ಪರಾರಿಯಾಗಿದ್ದರು.
 
ಇನ್ಫೋಸಿಸ್ ಉದ್ಯೋಗಿಯಾಗಿದ್ದ ಸ್ವಾತಿ ಉದ್ಯೋಗಕ್ಕಾಗಿ ತೆರಳಲು ರೈಲಿಗಾಗಿ ಕಾಯುತ್ತಾ ನಿಂತಿರುವಾಗ ಹತ್ಯೆಯಂತಹ ಘಟನೆ ನಡೆದಿತ್ತು.ಸ್ವಾತಿ ತುಂಬಾ ಉದಾರ ಮನೋಭಾವದವಳಾಗಿದ್ದರಿಂದ ಅವಳ ದೇಹದ ಭಾಗಗಳನ್ನು ದಾನವಾಗಿ ಆಸ್ಪತ್ರೆಗೆ ದಾನ ಕೊಡುವ ಬಗ್ಗೆ ಚಿಂತನೆ ನಡೆಸಿದ್ದೇವೆ ಎಂದು ತಿಳಿಸಿದ್ದಾರೆ. 
 
ಒಂದು ವೇಳೆ, ಯಾರಾದರೂ ಹಲ್ಲೆಯಾಗುವುದನ್ನು ತಡೆಯುತ್ತಿದ್ದರೆ ಸ್ವಾತಿ ಜೀವಂತವಾಗಿ ಉಳಿಯಬಹುದಾಗಿತ್ತು. ಕೇವಲ ಸ್ವಾರ್ಥಕ್ಕಾಗಿ ಅಥವಾ ಇತರ ಕಾರಣಕ್ಕಾಗಿ ಮೌನವಾಗಿದ್ದುದು ಸರಿಯಲ್ಲ ಎಂದು ಹೇಳಿದ್ದಾರೆ.
 
ಇನ್ಫೋಸಿಸ್ ಉದ್ಯೋಗಿಯಾದ ಸ್ವಾತಿ ನುಂಗಂಬಾಕಂ ರೈಲ್ವೆ ನಿಲ್ದಾಣದಲ್ಲಿ ಹತ್ಯೆಯಾದ ಘಟನೆಯನ್ನು ನಾಗರಿಕರು ಮತ್ತು ರಾಜಕೀಯ ಪಕ್ಷಗಳು ತೀವ್ರವಾಗಿ ಖಂಡಿಸಿದ್ದವು.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ