ಬಿಸಿಗಾಳಿಗೆ 1,300ಕ್ಕೂ ಹೆಚ್ಚು ಬಲಿ

ಗುರುವಾರ, 28 ಮೇ 2015 (09:41 IST)
ಬಿಸಿಗಾಳಿಯ ಹೊಡೆತಕ್ಕೆ ದೇಶಾದ್ಯಂತ ಬಲಿಯಾಗಿರುವವರ ಸಂಖ್ಯೆ 1300 ದಾಟಿದೆ. 

ಆಂಧ್ರಪ್ರದೇಶ ಮತ್ತು ತೆಲಂಗಾಣಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಿದ್ದು, 1200 ಕ್ಕಿಂತಲೂ ಹೆಚ್ಚು ಜನರು ಬಿಸಿಲಿ ಝಳಕ್ಕೆ ಜೀವ ಕಳೆದುಕೊಂಡಿದ್ದಾರೆ. ಉತ್ತರ ಭಾರತದ ಅನೇಕ ರಾಜ್ಯಗಳಲ್ಲಿ ಸಹ ಜನರು ಬಿಸಿಲಿನ ತಾಪಕ್ಕೆ ಪ್ರಾಣ ಬಿಟ್ಟಿದ್ದಾರೆ. 
 
ಹರಿಯಾಣ, ಪಂಜಾಬ್, ಬಿಹಾರ್, ಒಡಿಶಾ, ಉತ್ತರಪ್ರದೇಶ್, ರಾಜಸ್ಥಾನ್, ಮಹಾರಾಷ್ಟ್ರ, ಛತ್ತೀಸ್‌ಗಢ್, ಪಶ್ಚಿಮ ಬಂಗಾಳಗಳಲ್ಲಿ ತಾಪಮಾನ 40 ರಿಂದ 47 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. 
 
ಗುಜರಾತ್‍ನ ಹಲವೆಡೆ ಪ್ರಾಣಿ ಸಂಗ್ರಹಾಲಯಗಳಲ್ಲಿನ ಪ್ರಾಣಿ, ಪಕ್ಷಿಗಳನ್ನು ಉಳಿಸಿಕೊಳ್ಳಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ. ಪ್ರಾಣಿ, ಪಕ್ಷಿಗಳ ಶೆಡ್‍ಗಳ ಮೇಲೆ ನೀರು ಸಿಂಪಡಿಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ