ಜನದಟ್ಟಣೆಯಲ್ಲಿ ಸಿಲುಕಿದ್ದ ಮಕ್ಕಳನ್ನು ರಕ್ಷಿಸಿದ ಹೇಮಾಮಾಲಿನಿ

ಭಾನುವಾರ, 23 ಆಗಸ್ಟ್ 2015 (14:12 IST)
ಇತ್ತೀಚಿಗೆ ಹೇಮಾಮಾಲಿನಿ ಇದ್ದ ಕಾರು ಇನ್ನೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಪುಟ್ಟ ಬಾಲಕಿಯೊಬ್ಬಳು ಮೃತಪಟ್ಟ ಸಂಗತಿ ನಿಮಗೆ ಗೊತ್ತೆ ಇದೆ. ಅಂದು ಹೇಮಾಮಾಲಿನಿ ತಾವು ಆಸ್ಪತ್ರೆಗೆ ಹೋಗುವ ಸಂದರ್ಭದಲ್ಲಿ  ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಸಹ ಕೊಂಡೊಯ್ದಿದ್ದರೆ ಅದು ಬದುಕುಳಿಯುತ್ತಿತ್ತು ಎಂಬ ಮಾತುಗಳು ಕೇಳಿ ಬಂದಿದ್ದವು. ಅಂದು ಕನಸಿನ ಕನ್ಯೆಯ ಬಗ್ಗೆ ಎಲ್ಲರೂ ಟೀಕೆಯ ಸುರಿಗಮಳೆಗರೆದಿದ್ದರರು. ಅಂದು ಅಷ್ಟು ಮಟ್ಟಿಗೆ ಟೀಕೆಗೊಳಗಾಗಿದ್ದ ಹೇಮಾಮಾಲಿನಿ  ಇಂದು ಮಥುರಾ ಸಮೀಪದ ರಾಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ ವೇಳೆ ಜನರ ಸಮೂಹದ ಮಧ್ಯೆ ಸಿಲುಕಿಕೊಂಡಿದ್ದ ಇಬ್ಬರು ಬಾಲಕರನ್ನು ರಕ್ಷಿಸುವ ಮೂಲಕ ಪ್ರಂಶಸೆಗೆ ಪಾತ್ರರಾಗಿದ್ದಾರೆ.

ಜನರ ಮಧ್ಯೆ ಇಬ್ಬರು ಬಾಲಕರು ಸಿಲುಕಿದ್ದನ್ನು ಕಂಡ ಮಥುರಾ ಸಂಸದೆ ಹೇಮಾ ಮಾಲಿನಿ, ತಕ್ಷಣ ತನ್ನ ಅಂಗರಕ್ಷಕರ ಜತೆ ಜನರ ಮಧ್ಯೆಯೇ ನುಗ್ಗಿ ಬಾಲಕರನ್ನು ರಕ್ಷಿಸಿದ್ದಾರೆ. ಹೇಮಾ ಮಾಲಿನಿ ಆ ಬಾಲಕರನ್ನು ರಕ್ಷಿಸದೇ ಹೋಗಿದ್ದಲ್ಲಿ ಜನದಟ್ಟಣೆಯ ಮಧ್ಯೆ ಅವರು ಅಪಾಯಕ್ಕೆ ಸಿಲುಕುವುದು ನಿಶ್ಚಿತವಾಗಿತ್ತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ.
 
ಶನಿವಾರ ಹೇಮಾ ಮಾಲಿನಿ ತಾವು ಪ್ರತಿನಿಧಿಸುವ ಮಥುರಾ ಸಂಸದೀಯ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ರಾಲ್ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ  ಸುಮಾರು ಸಾವಿರ ಜನರು ನೆರೆದಿದ್ದರು.
 
ಈ ಸಂದರ್ಭದಲ್ಲಿ ಸಂಸದೆ ರೈತರಿಗೆ ಪರಿಹಾರ ಧನ ಕೊಡಿಸುವ ಕುರಿತಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜತೆಯಲ್ಲಿ ಮಾತನಾಡಿದ್ದು, ಆದಷ್ಟು ಬೇಗ ಪರಿಹಾರ ಧನ ನಿಮ್ಮ ಕೈ ಸೇರಲಿದೆ ಎಂಬ ಭರವಸೆಯನ್ನು ನೀಡಿದರು. 
 
ಜತೆಗೆ ಕ್ಷೇತ್ರದಲ್ಲಿ  ಮೂಲಭೂತ ಸೌಕರ್ಯ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವ ವಾಗ್ದಾನ ಮಾಡಿದರು.

ವೆಬ್ದುನಿಯಾವನ್ನು ಓದಿ