ಹೇಮಾಮಾಲಿನಿ ಅವರು ಪ್ರಯಾಣಿಸುತ್ತಿದ್ದ ಮರ್ಸಿಡೆಸ್ ಬೆಂಜ್ ಕಾರು ಅದೇ ಮಾರ್ಗದಲ್ಲಿ ಬರುತ್ತಿದ್ದ ಆಲ್ಟೋ ಕಾರಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಅಪಘಾತ ಸಂಭವಿಸಿದೆ. ಹೇಮಾಮಾಲಿನಿ ಅವರ ಕಾರಿನ ಚಾಲಕನ ಅತಿ ವೇಗದ ಚಾಲನೆಯೇ ಘಟನೆ ಕಾರಣ ಎನ್ನಲಾಗುತ್ತಿದೆ . ಮಥುರಾ ಸಂಸದೆ ಹೇಮಾಮಾಲಿನಿ ಅವರ ಹಣೆಗೆ ಹೆಚ್ಚಿನ ಪೆಟ್ಟು ಬಿದ್ದಿದ್ದು ಅವರು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.