ಚೆನ್ನೈನಲ್ಲಿ ಭಾರೀ ಮಳೆ: ವೆಲ್ಲೂರಿನಲ್ಲಿ 6 ಜನರ ಸಾವು

ಮಂಗಳವಾರ, 1 ಡಿಸೆಂಬರ್ 2015 (12:17 IST)
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ತಮಿಳುನಾಡಿನಲ್ಲಿ ವರುಣನ ಆರ್ಭಟ ಮುಂದುವರಿದಿದೆ. ಕಾಂಚಿಪುರಂ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗಿದೆ.  ಚೆನ್ನೈ ಮಹಾನಗರ  ಮಳೆಯಿಂದ ಜನರು ತತ್ತರಗೊಂಡಿದ್ದಾರೆ. ವೆಲ್ಲೂರಿನಲ್ಲಿ  ಕುಂಭದ್ರೋಣ ಮಳೆಯಿಂದ 6 ಜನರು ಮೃತಪಟ್ಟಿದ್ದಾರೆ.  

ಮಳೆಯಿಂದ ಐತಿಹಾಸಿಕ ಮಧುರಾಂತಕಂ ಜಲಾಶಯ ಭರ್ತಿಯಾಗಿದೆ. ತಿರುವಳ್ಳೂರು ಪಟ್ಟಣ ಒಂದು ದ್ವೀಪದಂತೆ ಗೋಚರಿಸುತ್ತಿದ್ದು, ಸಂಪರ್ಕ ಕಡಿದುಕೊಂಡಿದೆ. ತಾಂಬರಂ ಪ್ರದೇಶದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ದೇಸಿಂಗು ನಗರದಲ್ಲಿ 500ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ. ಚೆನ್ನೈನ ಹೊರವಲಯದ ಪ್ರದೇಶಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಮನೆಯಿಂದ ಹೊರಬರದಂತೆ ನಿವಾಸಿಗಳಿಗೆ ಸೂಚಿಸಲಾಗಿದೆ. ರಾಮೇಶ್ವರಂ ಭಾಗದಲ್ಲೂ ಮಳೆಯ ಆರ್ಭಟ ಆರಂಭವಾಗಿದೆ.

 ಚೆನ್ನೈ, ಕಾಂಚೀಪುರಂ, ಕುಡ್ಡಲೋರ್, ವಿಲ್ಲುಪುಂ ಮತ್ತು ತಿರುವಳ್ಳೂರು ಜಿಲ್ಲೆಗಳಲ್ಲಿ ಶಾಲೆ ಮತ್ತು ಕಾಲೇಜುಗಳನ್ನು ಮುಚ್ಚಲಾಗಿದ್ದು, ಜಿಲ್ಲಾಧಿಕಾರಿಗಳು ರಜಾ ಘೋಷಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ