ಬಿಜೆಪಿ ಸಂಸದ ಕೀರ್ತಿ ಆಜಾದ್ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಹಾಕಿ ಇಂಡಿಯಾ ನಿರ್ಧಾರ

ಗುರುವಾರ, 4 ಫೆಬ್ರವರಿ 2016 (16:43 IST)
ಬಿಜೆಪಿಯಿಂದ ಅಮಾನತ್ತುಗೊಂಡ ಸಂಸದ ಕೀರ್ತಿ ಆಜಾದ್ ಹೊರಿಸಿದ ಭ್ರಷ್ಟಾಚಾರದ ಆರೋಪಗಳ ವಿರುದ್ಧ ಹಾಕಿ ಇಂಡಿಯಾ ಸಂಸ್ಥೆ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಲು ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ
 
ಸೋಮುವಾರ ಅಥವಾ ಮಂಗಳವಾರದಂದು ಕೀರ್ತಿ ಆಜಾದ್ ವಿರುದ್ಧ ದೆಹಲಿ ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ದಾಖಲಿಸಲಾಗುವುದು ಎಂದು ಹಾಕಿ ಇಂಡಿಯಾ ಅಧಿಕಾರಿಗಳು ತಿಳಿಸಿದ್ಗಾರೆ.
 
ಬಿಜೆಪಿ ಸಂಸದ ಕೀರ್ತಿ ಆಜಾದ್ ಅವರ ನಿರಂತರ ಭ್ರಷ್ಟಾಚಾರದ ಆರೋಪಗಳಿಂದ ಹಾಕಿ ಇಂಡಿಯಾ ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತಂದಿದೆಯಲ್ಲದೇ ಪ್ರಾಯೋಜಕರು ಕೂಡಾ ದೊರೆಯದಂತಾಗಿದೆ ಎಂದು ಹಾಕಿ ಇಂಡಿಯಾ ಮೂಲಗಳು ತಿಳಿಸಿವೆ. 
 
ಕೇಂದ್ರ ಸಚಿವ ಅರುಣ್ ಜೇಟ್ಲಿ ಹಾಕಿ ಇಂಡಿಯಾ ಅಧ್ಯಕ್ಷರಾಗಿದ್ದಾಗ ಡಿಡಿಸಿಎ ಮತ್ತು ಹಾಕಿ ಇಂಡಿಯಾ ಸಂಸ್ಥೆಯಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರ ನಡೆದಿತ್ತು ಎಂದು ಆಜಾದ್ ಆರೋಪಿಸಿದ್ದರು. ಆಜಾದ್ ವಿರುದ್ಧ ಕೋರ್ಟ್‌ನಲ್ಲಿ ದೂರು ದಾಖಲಿಸುವುದನ್ನು ಹಾಕಿ ಇಂಡಿಯಾ ಅಧ್ಯಕ್ಷ ನರೀಂದರ್ ಬಾತ್ರಾ ಖಚಿತಪಡಿಸಿದ್ದಾರೆ.
 
ಕೋರ್ಟ್‌ನಲ್ಲಿ ದಾವೆ ಹೂಡಲು ಅಗತ್ಯವಾದ ದಾಖಲೆಗಳನ್ನು ಸಂಘ್ರಹಿಸುತ್ತಿದ್ದು ಒಂದೆರಡು ದಿನಗಳಲ್ಲಿ ದೂರು ದಾಖಲಿಸಲಾಗುವುದು ಎಂದು ಬಾತ್ರಾ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ