ನಗರಗಳಲ್ಲಿ ಹಾದುಹೋಗುವ ಹೆದ್ದಾರಿಗಳಿಗೆ ಮದ್ಯ ನಿಷೇಧ ಅನ್ವಯಿಸುವುದಿಲ್ಲ: ಸುಪ್ರೀಂಕೋರ್ಟ್

ಮಂಗಳವಾರ, 11 ಜುಲೈ 2017 (16:55 IST)
ನಗರಗಳಲ್ಲಿ ಹಾದುಹೋಗುವ ಹೆದ್ದಾರಿಗಳಿಗೆ ಮದ್ಯ ನಿಷೇಧ ಕಾನೂನು ಅನ್ವಯವಾಗುವುದಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಹೀಗಾಗಿ, ನಗರಗಳ ಮದ್ಯ ಮಾರಾಟಗಾರರು ನಿಟ್ಟುಸಿರು ಬಿಟ್ಟಿದ್ದಾರೆ.

ಚಂಢೀಗಡ ಸೇರಿದಂತೆ ಕೆಲ ರಾಜ್ಯಗಳಲ್ಲಿ ನಗರ ಪ್ರದೇಶದಲ್ಲಿ ಹಾದುಹೋಗುವ ಹೆದ್ದಾರಿ ಬಳಿ ಮದ್ಯ ಮಾರಾಟ ನಿಷೇಧವನ್ನ ಡಿನೋಟಿಫೈ ಮಾಡಲಾಗಿತ್ತು. ಇದನ್ನ ಪ್ರಶ್ನಿಸಿ ಎನ್`ಜಿಓ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ನಗರಗಳಲ್ಲಿ ಹಾದಹೋಗುವ ಹೆದ್ದಾರಿಗಳಲ್ಲಿ ಮದ್ಯ ನಿಷೇಧ ಕಾನೂನು ಅನ್ವಯಿಸುವುದಿಲ್ಲ ಎಂದು ಹೇಳಿದೆ.

ವಾಹನಗಳು ವೇಗವಾಗಿ ಸಂಚರಿಸುವ ಪ್ರದೇಶವನ್ನ ಗಮನದಲ್ಲಿರಿಸಿಕೊಂಡು ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಲಾಗಿತ್ತು. ಹೀಗಾಗಿ, ನಗರಗಳಲ್ಲಿ ಹಾದುಹೋಗುವ ಹೆದ್ದಾರಿಗಳಿಗೆ ಇದು ಅನ್ವಯಿಸುವುದಿಲ್ಲ ಎಂ ದಿರುವ ಕೋರ್ಟ್, ರಾಜ್ಯಗಳ ಡಿನೋಟಿಫೈ ಆದೇಶವನ್ನ ಎತ್ತಿಹಿಡಿದಿದೆ.

 ಸುಪ್ರೀಂಕೋರ್ಟ್ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧ ಮಾಡಿದ ಬಳಿಕ ನಗರಗಳಲ್ಲಿ ಹಾದುಹೋಗುವ ಹೆದ್ದಾರಿಗಳಲ್ಲೂ ಮದ್ಯದಂಗಡಿಗಳನ್ನ ಮುಚ್ಚಿಸಲಾಗಿತ್ತು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ