ಬಾಲರಾಮನ ದೇವಸ್ಥಾನ ಕೆಡವಿದ ಆರೋಪ:ಎಲ್. ಕೆ. ಅಡ್ವಾಣಿ ವಿರುದ್ಧ ಹಿಂದೂ ಮಹಾಸಭಾ ಮೊಕದ್ದಮೆ

ಶನಿವಾರ, 6 ಫೆಬ್ರವರಿ 2016 (12:57 IST)
ಅಖಿಲ ಭಾರತೀಯ ಹಿಂದೂ ಮಹಾಸಭಾ ಬಿಜೆಪಿ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ವಿರುದ್ಧ ಮೊಕದ್ದಮೆ ಹೂಡುವ ಸನ್ನಾಹದಲ್ಲಿದೆ. 1992ರಲ್ಲಿ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಧ್ವಂಸ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಹೆಚ್‌ಪಿ ಕೋರ್ಟ್ ಮೆಟ್ಟಿಲೇರಲಿದೆ. 

ವರದಿಗಳ ಪ್ರಕಾರ  ಬಾಬರಿ ಧ್ವಂಸದ ಸಮಯದಲ್ಲಿ ಸ್ಥಳದಲ್ಲಿದ್ದ ಬಿಜೆಪಿಯ ಇತರ ಹಿರಿಯ ನಾಯಕರಾದ ಮರಳಿ ಮನೋಹರ್ ಜೋಶಿ, ಉಮಾ ಭಾರತಿ ವಿರುದ್ಧ ಸಹ ಹಿಂದೂ ಮಹಾಸಭಾ ಪ್ರಕರಣವನ್ನು ದಾಖಲಿಸಿಲಿದೆ. 
 
ಬಾಬರಿ ಮಸೀದಿಯ ಗುಮ್ಮಟದ ಕೆಳಗೆ ರಾಮನ ಮೂರ್ತಿ ಸಹ ಇತ್ತು. ಆದ್ದರಿಂದ ಬಿಜೆಪಿ ನಾಯಕರು ದೇವಸ್ಥಾನವನ್ನು ಸಹ ನಾಶ ಮಾಡಿದಂತಾಗಿದೆ ಎಂಬುದು ಸಭಾದ ಆರೋಪ. 
 
ಗುಮ್ಮಟದ ಕೆಳಗಿದ್ದ ಪ್ರದೇಶ ಬಾಲರಾಮನ ಕೃಪೆಗೊಳಪಟ್ಟಿತ್ತು. ಬಿಜೆಪಿ ನಾಯಕರ ನೇತೃತ್ವದಲ್ಲಿದ್ದ ಗುಂಪು ಮಸೀದಿಯನ್ನು ನಾಶಗೊಳಿಸಿತು. ಮುಸ್ಲಿಮ್ ಸಮುದಾಯದವರು ನಮಾಜ್ ಮಾಡಲು ಬಳಸುತ್ತಿದ್ದ ಮಸೀದಿಯ ಭಾಗ ಗುಮ್ಮಟದ ಕೆಳಗಿತ್ತು. ಆದರೆ ಅವರು ಸಂಪೂರ್ಣ ಕಟ್ಟಡವನ್ನು ನಾಶಗೊಳಿಸಿದರು. ಹೀಗಾಗಿ ಅವರು ಮಸೀದಿ ಮತ್ತು ದೇವಸ್ಥಾನ ಎರಡನ್ನು ನಾಶ ಮಾಡಿದಂತಾಯಿತು. ಅದಕ್ಕಾಗಿ ಅವರಿಗೆ ಶಿಕ್ಷೆಯಾಗಬೇಕು. ಹಿಂದೂಗಳ ಹಿತಾಸಕ್ತಿಗಳನ್ನು ನಾವು ಪ್ರತಿನಿಧಿಸುತ್ತೇವೆ ಎಂದು ಅವರು ಹೇಳುತ್ತಾರೆ . ಆದರೆ  ದೇವಸ್ಥಾನವನ್ನೇ ನೆಲಸಮಗೊಳಿಸಿದರು ಎಂದು ಅಖಿಲ ಹಿಂದೂ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪ್ರಾಣಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. 

ವೆಬ್ದುನಿಯಾವನ್ನು ಓದಿ