ಬಹುಸಂಖ್ಯಾತ ಹಿಂದೂಗಳಿದ್ದಲ್ಲಿ ಮಾತ್ರ ಪ್ರಜಾಪ್ರಭುತ್ವಕ್ಕೆ ಉಳಿವು: ಸ್ವಾಮಿ

ಸೋಮವಾರ, 2 ಮಾರ್ಚ್ 2015 (16:13 IST)
ದೇಶದಲ್ಲಿರುವ ಹಿಂದೂಗಳು ಪ್ರಜಾಪ್ರಭುತ್ವ ಮತ್ತು ಜಾತ್ಯಾತೀತವಾದವನ್ನು ನಂಬಿದ್ದಾರೆ. ಆದ್ದರಿಂದ ಕೇಂದ್ರದಲ್ಲಿ ಅದಿಕಾರರೂಢವಾಗಿರುವ ಬಿಜೆಪಿ ನೇತೃತ್ವದ ಸರಕಾರ ರಾಮಮಂದಿರ-ಬಾಬ್ರಿ ಮಸೀದಿ ವಿವಾದವನ್ನು ಶೀಘ್ರದಲ್ಲಿ ಕೈಗೆತ್ತಿಕೊಂಡು ಬಗೆಹರಿಸಬೇಕು ಎಂದು ಬಿಜೆಪಿ ಮುಖಂಡ ಸುಬ್ರಹ್ಮಮಣ್ಯಂ ಸ್ವಾಮಿ ಹೇಳಿದ್ದಾರೆ.
 
ವಿಎಚ್‌ಪಿ ಆಯೋಜಿಸಿದ ವಿರಾಟ್ ಹಿಂದೂ ಮಹಾಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಂದ್ರ ಸರಕಾರ ಹಿಂದೂಗಳ ಭಾವನೆಗಳಿಗೆ ಸ್ಪಂದಿಸಬೇಕು. ಕೂಡಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಆರಂಭಿಸಬೇಕು ಎಂದು ಒತ್ತಾಯಿಸಿದರು. 
 
ನಗರದ ಜವಾಹರ್‌ಲಾಲ್ ನೆಹರು ಕ್ರೀಡಾಂಗಣದಲ್ಲಿ ಒಂದು ಲಕ್ಷ ಜನಸಮೂಹಕ್ಕಾಗಿ ಭಾರಿ ವ್ಯವಸ್ಥೆ ಮಾಡಲಾಗಿತ್ತು. ಆದರೆ, ದಿನಪೂರ್ತಿ ಸುರಿದ ಮಳೆಯಿಂದಾಗಿ ಕಾರ್ಯಕ್ರಮ ಅಸ್ಥವ್ಯಸ್ಥವಾಗಿತ್ತು ಎಂದು ವಿಎಚ್‌ಪಿ ನಾಯಕರು ಬೇಸರ ವ್ಯಕ್ತಪಡಿಸಿದರು.
 
ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಸದಾ ಶೇ.50ಕ್ಕಿಂತ ಹೆಚ್ಚಿರಬೇಕು. ಹಿಂದೂಗಳ ಸಂಖ್ಯೆ ಹೆಚ್ಚಳವಾದಲ್ಲಿ ಪ್ರಜಾಪ್ರಎಭಉತ್ವ ಮತ್ತು ಜಾತ್ಯಾತೀತ ಉಳಿದಿರುತ್ತದೆ. ಮುಸ್ಲಿಮರು ಹೆಚ್ಚಾಗಿರುವ ಕಾಶ್ಮಿರ ಮತ್ತು ಕೇರಳದ ಮಾಲಾಪುರಮ್‌ನಂತಹ ಪ್ರದೇಶಗಳಲ್ಲಿ ಪ್ರಝಾಪ್ರಭುತ್ವ ಅಥವಾ ಜಾತ್ಯಾತೀತವಾದ ಕಂಡು ಬರುವುದಿಲ್ಲ ಎಂದು ಬಿಜೆಪಿ ಮುಖಂಡ ಸ್ವಾಮಿ ಅಭಿಪ್ರಾಯಪಟ್ಟರು.  
 

ವೆಬ್ದುನಿಯಾವನ್ನು ಓದಿ