ಹಿಂದೂ ಧರ್ಮ ಪ್ರೀತಿ, ನಂಬಿಕೆ, ಅನ್ಯೋನ್ಯತೆಯ ಪ್ರತೀಕ: ಮೋಹನ್ ಭಾಗವತ್

ಸೋಮವಾರ, 29 ಆಗಸ್ಟ್ 2016 (14:06 IST)
ಹಿಂದೂ ಧರ್ಮದ ಸಿದ್ಧಾಂತ ಯಾರ ವಿರುದ್ಧವೂ ಅಲ್ಲ. ಹಿಂದೂ ಧರ್ಮವು ಪ್ರೀತಿ, ನಂಬಿಕೆ ಮತ್ತು ಅನ್ಯೋನ್ಯತೆಯ ಪ್ರತೀಕ  ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಪ್ರತಿಪಾದಿಸಿದರು.  ಹಿಂದುತ್ವ ಯಾವುದೇ ಹಗೆತನ ಅಥವಾ ವಿರೋಧದಿಂದ ಕೂಡಿಲ್ಲ. ಆದರೆ ಪ್ರೀತಿ, ನಂಬಿಕೆ ಮತ್ತು ಆತ್ಮೀಯತೆಯ ಸಿಂಚನವಾಗಿದೆ ಎಂದು ಭಾಗವತ್ ಸರಸ್ವತಿ ಶಿಶು ಮಂದಿರದಲ್ಲಿ ಸ್ವಯಂಸೇವಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ಹಿಂದುಧರ್ಮದ ಸಿದ್ಧಾಂತವನ್ನು ಪ್ರತಿಪಾದಿಸಿದರು.
 
ಆರ್‌ಎಸ್‌ಎಸ್ ಕೋಮುವಾದಿ ಅಜೆಂಡಾ ಹೊಂದಿದ್ದು ಮುಸ್ಲಿಂ ವಿರೋಧಿಯಾಗಿದೆ ಎಂದು ಅನೇಕ ಬಿಜೆಪಿಯೇತರ ಪಕ್ಷಗಳ ಆರೋಪದ ಹಿನ್ನೆಲೆಯಲ್ಲಿ ಭಾಗವತ್ ಪ್ರತಿಕ್ರಿಯೆ ಮಹತ್ವ ಪಡೆದಿದೆ. ನಾವು ದೇಶಕ್ಕಾಗಿ ದುಡಿಯುತ್ತೇವೆ. ಇದು ಧಾರ್ಮಿಕ ಆಚರಣೆ ಕುರಿತದ್ದಲ್ಲ. ಇದು ಆಧ್ಯಾತ್ಮಿಕತೆ ಮತ್ತು ಸತ್ಯವನ್ನು ಆಧರಿಸಿದೆ ಎಂದು ಭಾಗವತ್ ಪ್ರತಿಪಾದಿಸಿದರು.
 
ಆದಾಗ್ಯೂ ದುರ್ಬಲವಾಗಿ ಉಳಿಯುವುದು ಹಿಂದುತ್ವವಲ್ಲ. ಹಿಂದುಗಳು ಅಸಹಿಷ್ಣುಗಳಾಗದೇ ಸರ್ವರಿಗೂ ಆಪ್ಯಾಯಮಾನವಾದ ಸಮಾಜದ ಅಗತ್ಯವಿದೆ ಎಂದು ಪ್ರತಿಪಾದಿಸಿದರು. ಸಮಾಜವು ನಮ್ಮ ದೇವರು, ನಾವು ಸಮಾಜದ ಸೇವೆಗೆ ಇಲ್ಲಿದ್ದೇವೆ. ನಾವು ಪ್ರತಿಯಾಗಿ ಏನು ಸಿಗುತ್ತದೆಂದು ಯೋಚಿಸಬಾರದು. ಹಿಂದೂ ರಾಷ್ಟ್ರದ ಸರ್ವತೋಮುಖ ಅಭಿವೃದ್ಧಿಗೆ ನಾವು ದುಡಿಯುತ್ತಿದ್ದೇವೆ ಎಂದು ಭಾಗವತ್ ಹೇಳಿದರು.
 
ಪ್ರತಿಫಲಾಪೇಕ್ಷೆಯಿಂದ ಯಾವುದೇ ಕೆಲಸ ಮಾಡಬಾರದು. ಅಹಿಂಸೆ ಮತ್ತು ಅಸಹಿಷ್ಣುತೆ ಕುರಿತು ಭಗವಾನ್ ಬುದ್ಧ ಬೋಧಿಸಿದ್ದನೆಂದು ಅವರು ನುಡಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ