ಎಲ್ಲ ಧರ್ಮದವರಿಗೂ ಎರಡು ಮಕ್ಕಳು ಕಡ್ಡಾಯಗೊಳಿಸಬೇಕು: ಗಿರಿರಾಜ್ ಸಿಂಗ್

ಗುರುವಾರ, 21 ಏಪ್ರಿಲ್ 2016 (14:39 IST)
ಜನಸಂಖ್ಯೆ ನೀತಿಯಲ್ಲಿ ಬದಲಾವಣೆ ಪ್ರತಿಪಾದಿಸಿದಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಎರಡು ಮಕ್ಕಳ ನಿಯಮ ಎಲ್ಲಾ ಧರ್ಮಗಳಿಗೆ ಅನ್ವಯಿಸಬೇಕು ಎಂದು ಒತ್ತಿ ಹೇಳಿದ್ದಾರೆ.
 
ಬಿಹಾರದ ಬಗಾಹಾದಲ್ಲಿ ನಡದ ಸಾಂಸ್ಕೃತಿಕ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡುತ್ತಿದ್ದ ನವಾಡಾ ಸಂಸದ, ಭಾರತ ತನ್ನ ಜನಸಂಖ್ಯಾ ನೀತಿಯನ್ನು ವಿಫಲರಾದರೆ ನಮ್ಮ ಹೆಣ್ಣುಮಕ್ಕಳು ಸುರಕ್ಷಿತರಾಗಿರುವುದಿಲ್ಲ ಮತ್ತು ಪಾಕಿಸ್ತಾನದಲ್ಲಿರುವಂತೆ ಇವರನ್ನು ಕೂಡ ಬುರ್ಖಾದ ಹಿಂದೆ ಇರುವಂತೆ ಮಾಡಬೇಕಾಗುತ್ತದೆ ಎಂದು ಕಳವಳ ವ್ಯಕ್ತ ಪಡಿಸಿದ್ದಾರೆ. 
 
ಹಿಂದೂಗಳಿಗೂ ಮತ್ತು ಮುಸಲ್ಮಾನರಿಗೂ ಎರಡೇ ಮಕ್ಕಳಿರಬೇಕು. ನಮ್ಮ  ಜನಸಂಖ್ಯೆ ಕಡಿಮೆಯಾಗುತ್ತಿದೆ. ಬಿಹಾರದ 7 ಜಿಲ್ಲೆಗಳಲ್ಲಿ ನಮ್ಮ ಜನಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಗ್ಗುತ್ತಿದೆ. ಜನಸಂಖ್ಯಾ ನಿಯಂತ್ರಣದ ನಿಯಮಗಳನ್ನು ಬದಲಿಸಬೇಕಿದೆ. ಆಗಲೇ ನಮ್ಮ ಹೆಣ್ಣು ಮಕ್ಕಳು ಸುರಕ್ಷಿತವಾಗಿರುತ್ತಾರೆ. ಇಲ್ಲದಿದ್ದರೆ ಪಾಕಿಸ್ತಾನದಂತೆ ನಮ್ಮ ಹೆಣ್ಣುಮಕ್ಕಳಿಗೂ ಬುರ್ಖಾ ಹಿಂದೆ ಇಡಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ. 
 
ಬಿಹಾರದ ಅನೇಕ ಜಿಲ್ಲೆಗಳಲ್ಲಿ ಹಿಂದೂಗಳಿಗಿಂತ ಮುಸ್ಲಿಮರ ಜನಸಂಖ್ಯೆ ಗಣನೀಯವಾಗಿ ಏರುತ್ತಿರುವುದರ ಬಗ್ಗೆ ಅವರು ಬೇಸರ ತೋಡಿಕೊಂಡಿದ್ದಾರೆ. 
 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.
 
 

ವೆಬ್ದುನಿಯಾವನ್ನು ಓದಿ