ಹಿಂದುತ್ವ ರಾಷ್ಟ್ರೀಯತೆಯ ಸಂಕೇತ, ಆರೆಸ್ಸೆಸ್ ಹಿಂದುತ್ವದ ಪ್ರತಿಪಾದಕ: ಜಾರ್ಖಂಡ್ ಸಿಎಂ

ಶನಿವಾರ, 25 ಏಪ್ರಿಲ್ 2015 (16:19 IST)
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಿಂದುತ್ವದ ಪ್ರತಿಪಾದಕ ಸಂಸ್ಥೆಯಾಗಿದ್ದರಿಂದ ದೇಶದ ಹಿತಾಸಕ್ತಿಗೆ ಮತ್ತು ರಾಷ್ಟ್ರೀಯತೆಗೆ ಧಕ್ಕೆ ತರುವಂತಹ ವಿಷಯಗಳಿಗೆ ಯಾವತ್ತೂ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಜಾರ್ಖಂಡ್ ಮುಖ್ಯಮಂತ್ರಿ ರಘುವೀರ್ ದಾಸ್ ಹೇಳಿದ್ದಾರೆ.  

ಹಿಂದುತ್ವ ರಾಷ್ಟ್ರೀಯತೆಯ ಸಂಕೇತ, ಆರೆಸ್ಸೆಸ್ ಹಿಂದುತ್ವದ ಆರಾಧಕ ಸಂಸ್ಥೆಯಾಗಿರುವುದರಿಂದ ದೇಶಕ್ಕೆ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನಡೆಯುತ್ತಿದೆ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ರಾಜಾ ಭಾಹು ಮೆಮೋರಿಯಲ್ ಬಿಲ್ಡಿಂಗ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜಕೀಯ ಲಾಭಕ್ಕಾಗಿ ಜಾತಿಯ ಆಧಾರದ ಮೇಲೆ ಪಕ್ಷಗಳು ಸಮಾಜವನ್ನು ಒಡೆಯುತ್ತಿವೆ. ಆದರೆ, ಆರೆಸ್ಸೆಸ್ ದೇಶದ ಜನತೆಯಲ್ಲಿ ಸಾಮರಸ್ಯ ಬಿತ್ತಲು ಪ್ರಯತ್ನಿಸುತ್ತಿವೆ ಎಂದರು.

ಆರೆಸ್ಸೆಸ್ ಸಂಸ್ಥೆ ಸಾಂಸ್ಕ್ರತಿಕ ಕೇಂದ್ರ ಎಂದು ಬಣ್ಣಿಸಿದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಇಂತಹ ಕಟ್ಟಡಗಳನ್ನು ನಿರ್ಮಿಸಲು ಸರಕಾರ ಸದಾ ನೆರವು ನೀಡಲು ಸಿದ್ದವಾಗಿದೆ ಎಂದು ಜಾರ್ಖಂಡ್ ಮುಖ್ಯಮಂತ್ರಿ ರಘುವೀರ್ ದಾಸ್ ಹೇಳಿದ್ದಾರೆ.  

ವೆಬ್ದುನಿಯಾವನ್ನು ಓದಿ