ಭಾರತ-ಪಾಕಿಸ್ತಾನದಲ್ಲಿ ಇತಿಹಾಸದ ಹತ್ಯೆ ಮಾಡಲಾಗಿದೆ: ಕಸೂರಿ

ಸೋಮವಾರ, 12 ಅಕ್ಟೋಬರ್ 2015 (21:12 IST)
ಶಿವಸೇನೆ ಬೆದರಿಕೆಯ ಮಧ್ಯೆಯೂ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಕೆ.ಎಂ.ಕಸೂರಿ ತಮ್ಮ ನೈದರ್ ಎ ಹಾಕ್ ನಾರ್ ಎ ಡೊವ್ ಎನ್ನುವ ಶೀರ್ಷಿಕೆಯುಳ್ಳ ಪುಸ್ತಕವನ್ನು ಇಂದು ಸಂಜೆ ಬಿಡುಗಡೆಗೊಳಿಸಿದರು.
 
ಇಂದು ಬೆಳಿಗ್ಗೆ ಶಿವಸೇನೆ ಕಾರ್ಯಕರ್ತರಿಂದ ಮಸಿ ಬಳಸಿಕೊಂಡಿದ್ದ ಸುಧೀಂದ್ರ ಕುಲ್ಕರ್ಣಿ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಹಾಜರಾಗಿ ಮಾತನಾಡಿದ ಅವರು, ಇತಿಹಾಸದಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಉಭಯ ದೇಶಗಳ ಸಂಬಂಧಗಳ ವೃದ್ಧಿಗೆ ಈ ಪುಸ್ತಕ ತುಂಬಾ ಮಹತ್ವದ್ದಾಗಿದೆ ಎಂದರು.
 
ಪುಸ್ತಕ ಬಿಡುಗಡೆಯ ಮಹತ್ವದ ಕುರಿತಂತೆ ಆಯೋಜಿಸಲಾಗಿರುವ ಕಾರ್ಯಕ್ರಮ ಕುರಿತಂತೆ ಚರ್ಚಿಸಲು ನಿನ್ನೆ ಶಿವಸೇನೆ ಮುಖ್ಯಸ್ಥ ಉದ್ಭವ್ ಠಾಕ್ರೆ ನಿವಾಸಕ್ಕೆ ತೆರಳಿದ್ದೆ ಎಂದು ಹೇಳಿದರು.
 
ಮುಂಬೈ ನಗರ ಭಾರತ ಮತ್ತು ಪಾಕಿಸ್ತಾನದ ಶಾಂತಿ ಮಾತುಕತೆಗೆ ವೇದಿಕೆಯಾಗಲಿದೆ. ಆದರೆ, ಕಾರ್ಯಕ್ರಮ ಬೆದರಿಕೆ ಮಧ್ಯೆ ನಡೆಯುತ್ತಿರುವುದರಿಂದ ಕಾರ್ಯಕ್ರಮದ ಉದ್ದೇಶವೇ ಮರೆತಂತಾಗಿದೆ. ಮುಂಬೈ ವಾಸಿಗಳು ನಗರದ ಮೌಲ್ಯಗಳನ್ನು ಹದಗೆಡಿಸುವ ಅಧಿಕಾರ ಯಾವುದೇ ಸಂಘಟನೆಗೆ ನೀಡುವುದಿಲ್ಲ ಎನ್ನುವ ನಂಬಿಕೆಯಿದೆ ಎಂದರು. 
 
ಮಾತುಕತೆಯ ಮೂಲಕ ಹೊಸ ಇತಿಹಾಸ ಸೃಷ್ಟಿಸಬಹುದು. ಆದ್ದರಿಂದ, ಉಭಯ ಸರಕಾರಗಳು ಮಾತುಕತೆ ಮುಂದುವರಿಸಬೇಕು. ನಮ್ಮ ಕಾರ್ಯಕ್ರಮದ ಉದ್ದೇಶವು ಅದೇ ಆಗಿದೆ ಎಂದು ಸ್ಪಷ್ಟಪಡಿಸಿದರು.
 
ಪ್ರತಿಯೊಬ್ಬ ಪಾಕಿಸ್ತಾನಿ ನಾಗರಿಕ ಭಾರತದ ವಿರುದ್ಧವಾಗಿದ್ದಾನೆ ಎಂದು ತಾವು ಭಾವಿಸಬಾರದು. ಕಸೂರಿ ತಂದೆ ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಹೋರಾಟ ಮಾಡುತ್ತಿರುವಾಗ ಬಂಧಿತರಾಗಿದ್ದರು. ಅವರೆಲ್ಲಾ ಕಾಂಗ್ರೆಸ್ ಬೆಂಬಲಿಗರು ಎಂದು ಉದ್ಭವ್ ಠಾಕ್ರೆಯವರಿಗೆ ಮಾಹಿತಿ ನೀಡಿದ್ದಾಗಿ ಕುಲ್ಕರ್ಣಿ ಹೇಳಿದರು. 
 
ಇದೇ ಸಂದರ್ಭದಲ್ಲಿ ಮಾತನಾಡಿದ ಕಸೂರಿ, ಪುಸ್ತಕ ಬರೆಯುವ ಉದ್ದೇಶವೆಂದರೆ ಉಭಯ ದೇಶಗಳಲ್ಲೂ ಇತಿಹಾಸದ ಹತ್ಯೆ ಮಾಡಲಾಗಿದೆ. ಆದರೆ, ಈ ಪುಸ್ತಕ ಸತ್ಯ ಸಂಗತಿಗಳನ್ನು ಬೆಳಕಿಗೆ ತರುವ ಚಿಂತನೆಯಿಂದ ಬರೆಯಲಾಗಿದೆ. ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಭಾರಿ ಭಧ್ರತೆ ಒದಗಿಸಿದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ಗೆ ಅವರಿಗೆ ಧನ್ಯವಾದಗಳು ಎಂದು ತಿಳಿಸಿದರು.

ವೆಬ್ದುನಿಯಾವನ್ನು ಓದಿ