ಬಿಜೆಪಿ-ಪಿಡಿಪಿ ಸರಕಾರ ರಚಿಸಲು ಸಿದ್ದವಾಗದಿದ್ರೆ ಚುನಾವಣೆ ಘೋಷಿಸಿ: ಫಾರೂಕ್ ಅಬ್ದುಲ್ಲಾ

ಸೋಮವಾರ, 1 ಫೆಬ್ರವರಿ 2016 (20:35 IST)
ಒಂದು ವೇಳೆ, ಬಿಜೆಪಿ ಮತ್ತು ಪಿಡಿಪಿ ಪಕ್ಷಗಳು ಸರಕಾರ ರಚಿಸಲು ಸಿದ್ದವಾಗದಿದ್ದಲ್ಲಿ ಹೊಸತಾಗಿ ಚುನಾವಣೆ ನಡೆಸಬೇಕು ಎಂದು ನ್ಯಾಷನಲ್ ಕಾನ್ಪ್‌ರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಒತ್ತಾಯಿಸಿದ್ದಾರೆ.
 
ಪಿಡಿಪಿ ಮತ್ತು ಬಿಜೆಪಿಗೆ ಜನತೆ ಬಹುಮತ ನೀಡಿದ್ದಾರೆ. ಆದರೆ, ಎರಡೂ ಪಕ್ಷಗಳು ಸರಕಾರ ರಚಿಸಲು ನಿರಾಕರಿಸಿದಲ್ಲಿ ಜನತೆಯ ಬಳಿಗೆ ಹೋಗುವುದು ಸೂಕ್ತ. ಜನತೆ ಎನ್‌ಸಿ ಪಕ್ಷಕ್ಕೆ ಬಹುಮತ ನೀಡಿದಲ್ಲಿ ಸರಕಾರ ರಚಿಸಲು ಸಿದ್ದ ಎಂದು ಘೋಷಿಸಿದರು.
 
ಸರಕಾರ ರಚಿಸುವ ಕಸರತ್ತು ತೊಳಲಾಟದಲ್ಲಿರುವಂತೆಯೇ ಬಿಜೆಪಿಯೊಂದಿಗೆ ಸೇರಿ ಸರಕಾರ ರಚಿಸಲು ಸಿದ್ದ ಎಂದು ಅಬ್ದುಲ್ಲಾ ಬಹಿರಂಗ ಹೇಳಿಕೆ ನೀಡಿದ್ದಾರೆ.
 
ಜಮ್ಮು ಕಾಶ್ಮಿರದ ರಾಜ್ಯಪಾಲ ಎನ್‌.ಎನ್.ವೋಹ್ರಾ, ಸರಕಾರ ರಚಿಸುವ ಕುರಿತಂತೆ ಬಿಜೆಪಿ, ಪಿಡಿಪಿ ಪಕ್ಷಗಳು ತಮ್ಮ ನಿಲುವು ತಿಳಿಸುವಂತೆ ಆದೇಶಿಸರುವುದು ಸ್ವಾಗತಾರ್ಹ ನಿರ್ಧಾರ ಎಂದು ಬಣ್ಣಿಸಿದರು.
 
ರಾಜ್ಯಪಾಲರು ಉಭಯ ಪಕ್ಷಗಳ ಸಭೆ ಕರೆದು ಸರಕಾರ ರಚಿಸುವ ಬಗ್ಗೆ ಮಾಹಿತಿ ಪಡೆಯುತ್ತಿರುವುದು ಸಂತಸ ತಂದಿದೆ. ಉಭಯ ಪಕ್ಷಗಳು ಸರಕಾರ ರಚಿಸುತ್ತವೆಯೋ ಅಥವಾ ಇಲ್ಲವೋ ಎನ್ನುವುದರಲ್ಲಿ ಒಂದಂತೂ ಸ್ಪಷ್ಟವಾಗಲಿದೆ ಎಂದು ನ್ಯಾಷನಲ್ ಕಾನ್ಪ್‌ರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ.  

ವೆಬ್ದುನಿಯಾವನ್ನು ಓದಿ