ಜೀವಬೆದರಿಕೆ: ಗೃಹ ಸಚಿವ ರಾಜನಾಥ್ ಸಿಂಗ್‌‍ಗೆ ಬುಲೆಟ್ ಪ್ರೂಫ್ ಕಾರು

ಸೋಮವಾರ, 23 ಮಾರ್ಚ್ 2015 (14:40 IST)
ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ನಿಸ್ಸಂಶಯವಾಗಿ ಕೇಂದ್ರ ಸರಕಾರದದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ. ಇದೀಗ ರಾಜನಾಥ್ ಸಿಂಗ್ ಪ್ರಧಾನಿಯಂತೆ ಬುಲೆಟ್ ಪ್ರೂಫ್ ಕಾರು ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭದ್ರತಾ ಏಜೆನ್ಸಿಗಳು ಗೃಹ ಸಚಿವರಾಗಿ ಜೀವಬೆದರಿಕೆಯಿದೆ ಎಂದು ವರದಿಗಳು ನೀಡಿದ ಹಿನ್ನೆಲೆಯಲ್ಲಿ ಎನ್‌ಎಸ್‌ಜಿ ಕಮಾಂಡೋಗಳ ಝಡ್ ಪ್ಲಸ್ ಭದ್ರತೆಯನ್ನು ಹೊಂದಿರುವ ರಾಜನಾಥ್ ಸಿಂಗ್‌ ಇದೀಗ ಎಸ್‌‌ಪಿಜಿ ಭದ್ರತಾ ಪಡೆಯನ್ನು ಹೊಂದಲಿದ್ದಾರೆ ಎನ್ನಲಾಗಿದೆ.  

ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆಯ ನಂತರ ಜಾರಿಗೆ ಬಂದ ಎಸ್‌ಪಿಜಿ ಕಾಯ್ದೆಯನ್ವಯ, ಇಂತಹ ಭದ್ರತೆಯನ್ನು ಪ್ರಧಾನಿ, ಮಾಜಿ ಪ್ರಧಾನಿ ಮತ್ತು ಅವರ ಕುಟುಂಬದವರು ಮಾತ್ರ ಪಡೆಯಬಹುದಾಗಿದೆ.ಇದೀಗ ಗುಪ್ತಚರ ಏಜೆನ್ಸಿಗಳೊಂದಿಗೆ ಚರ್ಚೆಯ ನಂತರ ಇಂತಹ ಭದ್ರತೆಯನ್ನು ಗೃಹ ಸಚಿವ ರಾಜನಾಥ್‌ ಸಿಂಗ್‌ಗೆ ವಿಸ್ತರಿಸಲಾಗಿದೆ.  

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್‌ಗೆ ಇಸ್ಲಾಮಿಕ್ ಉಗ್ರ ಸಂಘಟನೆಗಳಿಂದ ಹಾಗೂ ನಕ್ಸಲ್‌ರಿಂದ ಬೆದರಿಕೆಯಿರುವ ಹಿನ್ನೆಲೆಯಲ್ಲಿ ಅವರ ಭದ್ರತೆ ಹೆಚ್ಚಳಕ್ಕೆ ಸರಕಾರ ಮತ್ತಷ್ಟು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ