17 ವರ್ಷದ ಯುವತಿಯ ಮೇಲೆ ಗ್ಯಾಂಗ್‌ರೇಪ್ ಎಸಗಿ ಅಶ್ಲೀಲ ವಿಡಿಯೋಗೈದ ಆರೋಪಿಗಳು

ಸೋಮವಾರ, 20 ಜೂನ್ 2016 (17:00 IST)
17 ವರ್ಷ ವಯಸ್ಸಿನ ಹದಿಹರೆಯದ ಯುವತಿಯನ್ನು ಅಪಹರಿಸಿದ ನಾಲ್ವರು ಆರೋಪಿಗಳು, ಆಕೆಯ ಮೇಲೆ ಗ್ಯಾಂಗ್‌ರೇಪ್ ಎಸಗಿ ಅತ್ಯಾಚಾರವೆಸಗುತ್ತಿರುವ ದೃಶ್ಯಗಳನ್ನು ವಿಡಿಯೋದಲ್ಲಿ ಸೆರೆಹಿಡಿದು ಸಾಮಾಜಿಕ ಜಾಲ ತಾಣಗಳಲ್ಲಿ  ಹರಿಬಿಟ್ಟ ಘಟನೆ ನ್ಯೂ ಮಂಡಿ ಪ್ರದೇಶದಲ್ಲಿ ನಡೆದಿದೆ.  
 
ಬಾಲಕಿಯ ಮೇಲೆ ಮೂರು ದಿನಗಳ ಹಿಂದೆ ಗ್ಯಾಂಗ್‌ರೇಪ್ ನಡೆದಿದ್ದರೂ ಆರೋಪಿಗಳ ಜೀವಬೆದರಿಕೆಯಿಂದಾಗಿ ಆಕೆಯ ಪೋಷಕರು ದೂರು ದಾಖಲಿಸುವಲ್ಲಿ ವಿಳಂಬವಾಗಿದೆ ಎಂದು ಪೊಲೀಸ್ ಠಾಣೆಯ ಅಧಿಕಾರಿ ರಾಜನಾಥ್ ತ್ಯಾಗಿ ತಿಳಿಸಿದ್ದಾರೆ.  
 
ಬಾಲಕಿಯ ದೂರಿನ ಪ್ರಕಾರ, ಆರೋಪಿಗಳಾದ ಸಿದ್ಧಾರ್ಥ, ಅಂಕಿತ್, ಮೊಂಟಿ ಮತ್ತು ಅತುಲ್ ಕುಮಾರ್ ಎನ್ನುವ ಆರೋಪಿಗಳು, 17 ವರ್ಷದ ಬಾಲಕಿಯನ್ನು ಅಪಹರಿಸಿ, ಫ್ಲ್ಯಾಟ್‌ಗೆ ಕರೆದುಕೊಂಡು ಹೋಗಿ ಗ್ಯಾಂಗ್‌ರೇಪ್ ಎಸಗಿದ್ದಾರೆ. ಗ್ಯಾಂಗ್‌ರೇಪ್ ಎಸಗುತ್ತಿರುವ ದೃಶ್ಯಗಳನ್ನು ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ದೂರಿನಲ್ಲಿ ದಾಖಲಾಗಿದೆ. 
 
ಅತ್ಯಾಚಾರವೆಸಗಿರುವ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದಲ್ಲಿ ಹತ್ಯೆ ಮಾಡುವುದಾಗಿ ಆರೋಪಿಗಳು ಬಾಲಕಿಗೆ ಬೆದರಿಕೆಯೊಡ್ಡಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಅತ್ಯಾಚಾರಕ್ಕೊಳಗಾದ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ