ಯೋಧ ಕಳುಹಿಸಿದ್ದ ಮದುವೆ ವಾರ್ಷಿಕೋತ್ಸವ ಗಿಫ್ಟ್ ಹುತಾತ್ಮನಾದ ಬಳಿಕ ಪತ್ನಿ ಕೈಸೇರಿತು..1
ಶುಕ್ರವಾರ, 17 ಫೆಬ್ರವರಿ 2017 (12:02 IST)
ಭಾರತೀಯ ಯೋಧನೊಬ್ಬ ಪತ್ನಿಗೆ ಮದುವೆ ವಾರ್ಷಿಕೋತ್ಸವಕ್ಕೆ ಕಳುಹಿಸಿದ್ದ ಉಡುಗೊರೆ ಆತ ಹುತಾತ್ಮನಾದ ಬಳಿಕ ಮನೆಗೆ ಬಂದಿರುವ ಘಟನೆ ಹರ್ಯಾಣದಿಂದ ವರದಿಯಾಗಿದೆ.
ಸತೀಶ್ ದಹಿಯಾ ಎಂಬ ಯೋಧ ಕಾಶ್ಮೀರದಲ್ಲಿ ನುಸುಳಿದ್ದ ಉಗ್ರರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾಗಿದ್ದರು. ನುಸಳುಕೋರರನ್ನ ಹೊಡೆದುರುಳಿಸಿ ಶತ್ರುಗಳ ಗುಂಡಿಗೆ ಬಲಿಯಾಗಿದ್ದರು. ಇವತ್ತು ಅವರ ಪಾರ್ಥಿವಶರೀರವನ್ನ ಮನೆಗೆ ರವಾನಿಸಿಸಿದ್ದು, ಪಾರ್ಥಿವಶರೀರ ಮನೆಗೆ ಬಂದ ಬಳಿಕ ಸತೀಶ್ ಕಳುಹಿಸಿದ ಮದುವೆ ಉಡುಗೊರೆಯೂ ಪತ್ನಿ ಸುಜಾತಾ ಕೈಸೇರಿದೆ. ಇದನ್ನೇ ಇರಬೇಕು ವಿಧಿಯಾಟ ಎನ್ನುವುದು.
ಪಾರ್ಥಿವ ಶರೀರದ ಬಂದ ಬಳಿಕ ಉಡುಗೊರೆ ಮನೆಗೆ ಬಂದ ಬಗ್ಗೆ ಸುಜಾತಾ ಮಾಧ್ಯಮಗಳ ಬಳಿ ದುಃಖ ತೋಡಿಕೊಂಡಿದ್ದಾರೆ. ಸತೀಶ್ ಮತ್ತು ಸುಜಾತಾ ಮದುವೆಯಾಗಿ ವತ್ತಿಗೆ 3ನೇ ವರ್ಷ. ಗ್ರರ ವಿರುದ್ಧ ಕಾರ್ಯಾಚರಣೆಗೆ ಹೊರಡುವ ಮುನ್ನವೇ ಸತೀಶ್ ಪತ್ನಿಗೆ ಮದುವೆ ಉಡುಗೊರೆ ಕಳುಹಿಸಿದ್ದರು.